ಜೂನ್ 22ರಂದು ದಳಪತಿ ವಿಜಯ್ ಹುಟ್ಟುಹಬ್ಬ- ಫ್ಯಾನ್ಸ್‌ಗೆ ಗುಡ್ ನ್ಯೂಸ್

Public TV
1 Min Read

ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಅಭಿಮಾನಿಗಳಿಗೆ ಈಗ ಗುಡ್ ನ್ಯೂಸ್ ಸಿಕ್ಕಿದೆ. ಜೂನ್ 22ರಂದು ವಿಜಯ್ 50ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಅದೇ ದಿನ ಅವರ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ಮೂಲಕ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.‌ ಇದನ್ನೂ ಓದಿ:ಅಹಂಕಾರ ಪಂಕ್ಚರ್ ಮಾಡಿ ಸ್ಥಾನ ತೋರಿಸಿದ್ದಕ್ಕೆ ಧನ್ಯವಾದಗಳು ಎಂದ ಪ್ರಕಾಶ್ ರಾಜ್

ವಿಜಯ್ ನಟಿಸಿದ್ದ ‘ಪೋಕಿರಿ’ (Pokkiri) ಸಿನಿಮಾ ರೀ ರಿಲೀಸ್ ಆಗುತ್ತಿದೆ. 2007ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ವಿಜಯ್ ಹುಟುಹಬ್ಬದಂದು ಮತ್ತೆ ಮರು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ವಿಜಯ್‌ಗೆ ಆಸಿನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಅಂದು ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಮತ್ತೆ ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಅವಕಾಶ ಫ್ಯಾನ್ಸ್‌ಗೆ ಸಿಕ್ಕಿದೆ.

ಅಂದಹಾಗೆ, ವಿಜಯ್ ಸದ್ಯ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಾಜಕೀಯದಲ್ಲಿ ಆ್ಯಕ್ಟೀವ್ ಆಗಿರೋದ್ರಿಂದ ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ.

Share This Article