ನಟಿ ಜಾಹ್ನವಿ ಬಾಯ್ ಫ್ರೆಂಡ್ ಜೊತೆ ಇಟಲಿಗೆ ಹಾರಿದ್ದೇಕೆ?

By
1 Min Read

ಬಾಲಿವುಡ್‌ನಲ್ಲಿ (Bollywood) ಆಗಾಗ ಗುಸು-ಗುಸು ಪಿಸು-ಪಿಸು ಮಾತುಗಳು ಕೇಳಿಬರೋದು ಸರ್ವೆಸಾಮಾನ್ಯ. ಅದರಲ್ಲೂ ನಟ, ನಟಿಯರ ವಿಷ್ಯದಲ್ಲಂತೂ ಈ ಸುದ್ದಿ ಬೇಗನೇ ಸ್ಪ್ರೆಡ್ ಆಗಿಬಿಡುತ್ತೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ (Jahnavi Kapoor) ಹಾಗೂ ಶಿಖರ್ ಪಹಾರಿಯಾ  (Shikhar Pahariya)ವಿಷ್ಯದಲ್ಲೂ ಈ ಸುದ್ದಿ ಆಗಾಗ ಕೇಳಿ ಬರ್ತಾನೇ ಇರುತ್ತೆ. ಅದಕ್ಕೆ ಪುಷ್ಟಿ ಎಂಬಂತೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಪ್ರೀ-ವೆಡ್ಡಿಂಗ್ ಇತ್ತೀಚೆಗೆ ಇಟಲಿಯಲ್ಲಿ (Italy) ಅದ್ಧೂರಿಯಾಗಿ ನೆರವೇರಿದೆ. ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ತಾರೆಯರು ಭಾಗಿಯಾಗಿದ್ದರು. ಅದರಂತೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಹ ತಮ್ಮ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದು ವಿಶೇಷಗಳಲ್ಲಿ ವಿಶೇಷ.

ಹೌದು, ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಕೈ ಹಿಡಿದು ನಡೆದಿದ್ದಾರೆ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್. ಬಾಲಿವುಡ್ ಅಂಗಳದಲ್ಲಿ ಜಾಹ್ನವಿ ಕಪೂರ್ ಹಾಗೂ ಶಿಖರ್ ಪಹಾರಿಯಾ ಸುದ್ದಿ ಆಗಾಗ ಮೇನ್ ಸ್ಟ್ರೀಮ್ ಗೆ  ಬರ್ತಾನೆ ಇತ್ತು. ಅದಕ್ಕೆಲ್ಲ ಕ್ಯೂಟ್ ನಟಿ ಜಾನು ಆನ್ಸರ್ ಮಾಡ್ತಾನೆ ಬಂದಿದ್ದಾರೆ. ಇದೀಗ ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಜಾಹ್ನವಿ.

Share This Article