ರವೀನಾ ಟಂಡನ್ ರಸ್ತೆ ಅಪಘಾತ: ಪ್ರತಿಕ್ರಿಯೆ ಕೊಟ್ಟ ಕೆಜಿಎಫ್ ರಮಿಕಾ

By
1 Min Read

ಕೆಜಿಎಫ್ 2′ (KGF 2) ಸಿನಿಮಾದಲ್ಲಿ ರಮಿಕಾ ಪಾತ್ರದಲ್ಲಿ ನಟಿಸಿದ್ದ ರವೀನಾ ಟಂಡನ್ (Raveena Tandon) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಜೂನ್ 1ರಂದು ರಾತ್ರಿ ರವೀನಾ ಕಾರು (Car Accident) ಮೂವರು ಮಹಿಳೆಯರಿಗೆ ಗುದ್ದಿದೆ. ಈ ಪರಿಣಾಮ, ನಟಿ ರವೀನಾ ಮತ್ತು ಕಾರು ಚಾಲಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ರವೀನಾ ಮೇಲೆ ಹಲ್ಲೆಗೆ ಯತ್ನ ಕೂಡ ಮಾಡಲಾಗಿತ್ತು.

ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಅವರ ತಲೆ ಮತ್ತು ಮೂಗಿಗೆ ಗಾಯಗಳಾಗಿದ್ದವು. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳಿಯರು ಕಾರು ಚಾಲಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದರು. ಕಾರು ಚಾಲಕನ್ನು ಪಾರು ಮಾಡಲು ಬಂದ ನಟಿ, ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿದ್ದಾರೆ ಎನ್ನಲಾಗಿತ್ತು.

ಈ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ (Reaction) ನೀಡಿದ್ದಾರೆ ರವೀನಾ ಟಂಡನ್. ನನ್ನ ಕಾರು ಯಾರಿಗೂ ಡಿಕ್ಕಿ ಹೊಡೆದಿಲ್ಲ. ನಾನು ಕುಡಿದಿರಲಿಲ್ಲ. ನನ್ನ ಡ್ರೈವರ್ ನೆರವಿಗೆ ಧಾವಿಸಿದೆ. ಈ ಸಂದರ್ಭದಲ್ಲಿ ಅವರೇ ನನ್ನನ್ನು ಹೊಡೆಯೋಕೆ ಬಂದರು. ಇದರಲ್ಲಿ ನನ್ನದು ಮತ್ತು ನನ್ನ ಡ್ರೈವರ್ ದ್ದು ತಪ್ಪಿಲ್ಲ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

 

ಅಪಘಾತದಿಂದ ಮಹಿಳೆಗೆ ರಕ್ತಸ್ರಾವವಾಗಿದೆ ಎಂಬುದು ತಿಳಿದಿದೆ. ಈ ವಿಚಾರ ದೊಡ್ಡದಾಗುತ್ತಿದ್ದಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಬೇಡಿ ಎಂದು ರವೀನಾ ನೆರದವರಲ್ಲಿ ವಿನಂತಿಸಿದ್ದರು. ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ ಎಂದು ರವೀನಾ ಕೇಳಿಕೊಂಡಿದ್ದರು. ಚಾಲಕನ ರಕ್ಷಣೆಗೆ ಬಂದ ರವೀನಾ ಟಂಡನ್ ಮೇಲೆ ಮಹಿಳೆಯೊಬ್ಬರು ಹಲ್ಲೆಗೆ ಪ್ರಯತ್ನಿಸಿದ್ದರು.

Share This Article