ತಮಿಳಿನಲ್ಲಿ ಬಿಗ್‌ ಚಾನ್ಸ್-‌ ಸೂರ್ಯಗೆ ಪೂಜಾ ಹೆಗ್ಡೆ ನಾಯಕಿ

Public TV
2 Min Read

ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಕೆರಿಯರ್‌ನಲ್ಲಿ ಯಶಸ್ಸು ಸಿಗದೇ ಇದೀಗ ಮತ್ತೆ ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ತಮಿಳಿನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ತಮಿಳಿನ ಸ್ಟಾರ್ ನಟ ಸೂರ್ಯಗೆ (Actor Suriya) ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ

ಪೂಜಾ ಹೆಗ್ಡೆಗೆ ಅವಕಾಶಗಳು ಸಿಗುತ್ತಿವೆ ಆದರೆ ಯಶಸ್ಸು ಸಿಗುತ್ತಿಲ್ಲ. ಹಾಗಾಗಿ ನಟಿ ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಪೂಜಾ ಮೊದಲು ಬಣ್ಣ ಹಚ್ಚಿದ್ದೇ ತಮಿಳು ಸಿನಿಮಾಗೆ ಆ ನಂತರ ಅವರು ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ಬ್ಯುಸಿಯಾದರು. ಈಗ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಮತ್ತು ಸೂಕ್ತ ಕಥೆ ಸಿಕ್ಕಿದೆ. ಹಾಗಾಗಿ ಮತ್ತೆ ತಮಿಳಿನಲ್ಲಿ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಟ ಸೂರ್ಯ ‘ಕಂಗುವ’ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ರಜನಿಕಾಂತ್ ನಟಿಸಿದ ಪೆಟ್ಟಾ, ಮಹಾನ್ ಚಿತ್ರಗಳಿಗೆ ಇವರೇ ನಿರ್ದೇಶನ ಮಾಡಿದ್ದರು. ಈಗ ಸೂರ್ಯ ಮತ್ತು ಪೂಜಾ ಹೆಗ್ಡೆಗೆ ಕಾರ್ತಿಕ್ ಸುಬ್ಬರಾಜ (Karthik Subbaraj) ನಿರ್ದೇಶನ ಮಾಡಲಿದ್ದಾರೆ. ಸೂರ್ಯ ನಟಿಸಲಿರುವ 44ನೇ (Suriya 44) ಚಿತ್ರಕ್ಕೆ ಪೂಜಾ ನಾಯಕಿ ಎಂದು ಅಧಿಕೃತ ಘೋಷಣೆ ಕೂಡ ಮಾಡಿದ್ದಾರೆ.

ಮೊದಲ ಬಾರಿಗೆ ಸೂರ್ಯ ಮತ್ತು ಪೂಜಾ ಜೊತೆಯಾಗುತ್ತಿದ್ದಾರೆ. ಹಾಗಾಗಿ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಯಶಸ್ಸಿಗಾಗಿ ಎದುರು ನೋಡ್ತಿರುವ ನಟಿಗೆ ಈ ತಮಿಳು ಚಿತ್ರ ಕೈಹಿಡಿಯುತ್ತಾ ಎಂದು ಕಾಯಬೇಕಿದೆ.

ಅಂದಹಾಗೆ. ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನ ಜೊತೆ ಹೊಸ ಚಿತ್ರ, ನಾಗಚೈತನ್ಯ ಜೊತೆ ತೆಲುಗು ಚಿತ್ರವೊಂದು ನಟಿ ಒಪ್ಪಿಕೊಂಡಿದ್ದಾರೆ.

Share This Article