ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ವಿಶ್ವಕ್ ಸೇನ್ ಎಂಟ್ರಿ

Public TV
1 Min Read

ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ‘ಸಲಾರ್’ ಬಳಿಕ ಜ್ಯೂ.ಎನ್‌ಟಿಆರ್ ಜೊತೆ ಕೈಜೋಡಿಸಿದ್ದಾರೆ. ಈ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಸದ್ಯ ತಾರಕ್ ಸಿನಿಮಾಗೆ ಯುವ ನಟ ವಿಶ್ವಕ್ ಸೇನ್ (Vishwak Sen) ಸಾಥ್ ನೀಡಿದ್ದಾರೆ. ‘ಗ್ಯಾಂಗ್ಸ್ ಆಫ್ ಗೋದಾವರಿ’ ಚಿತ್ರದ ಮೂಲಕ ಗಮನ ಸೆಳೆದಿರುವ ನಟ ಈಗ ಜ್ಯೂ.ಎನ್‌ಟಿಆರ್ (Jr. Ntr) ತಂಡದ ಜೊತೆ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಕುತೂಹಲ ಕೆರಳಿಸಿದ ವಿಜಯ್‌ ಸೇತುಪತಿ ನಟನೆಯ 50ನೇ ಚಿತ್ರದ ‌’ಮಹಾರಾಜ’ ಟ್ರೈಲರ್

ಕೆಲವು ಉತ್ತಮ ಸಿನಿಮಾಗಳನ್ನು ನೀಡಿ ಬೇಡಿಕೆಯ ಯುವ ನಟ ಎನಿಸಿಕೊಂಡಿರುವ ವಿಶ್ವಕ್ ಸೇನ್ ಅವರು ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಸಿನಿಮಾದಲ್ಲಿ ನಾಯಕ ನಟನಷ್ಟೆ ಗಟ್ಟಿಯಾದ ಇನ್ನೊಂದು ಪಾತ್ರವಿದ್ದು, ಆ ಪಾತ್ರವನ್ನು ವಿಶ್ವಕ್ ನಿರ್ವಹಿಸಲಿದ್ದಾರೆ. ಹಲವು ವರ್ಷಗಳಿಂದ ಜ್ಯೂ.ಎನ್‌ಟಿಆರ್ ಮತ್ತು ವಿಶ್ವಕ್ ಸ್ನೇಹಿತರು. ಹಾಗಾಗಿ ವಿಶ್ವಕ್ ಹೆಸರನ್ನು ಸ್ವತಃ ತಾರಕ್ ಸೂಚಿಸಿದ್ದು, ಆ ಪಾತ್ರವನ್ನು ನಟ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಜ್ಯೂ.ಎನ್‌ಟಿಆರ್ ಜೊತೆಗಿನ ಸಿನಿಮಾದ ನಂತರ ‘ಸಲಾರ್ 2’ ಸಿನಿಮಾವನ್ನು ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. ಹಾಗಾಗಿ ಸದ್ಯ ಡ್ರ್ಯಾಗನ್ ಸಿನಿಮಾದ ಕೆಲಸದಲ್ಲಿ ‘ಕೆಜಿಎಫ್’ ನಿರ್ದೇಶಕ ತೊಡಗಿಸಿಕೊಂಡಿದ್ದಾರೆ. ಜ್ಯೂ.ಎನ್‌ಟಿಆರ್‌ಗಾಗಿ ಉತ್ತಮ ಕಥೆಯನ್ನೇ ಪ್ರಶಾಂತ್ ನೀಲ್ ಬರೆದಿದ್ದಾರೆ. ಇದೇ ಆಗಸ್ಟ್‌ನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ.

Share This Article