Exit Polls: ಕರ್ನಾಟಕದಲ್ಲಿ 20 ರ ಗಡಿ ದಾಟಿದ ಬಿಜೆಪಿ – ಕಾಂಗ್ರೆಸ್‌ಗೆ ಎಷ್ಟು?

Public TV
1 Min Read

ಬೆಂಗಳೂರು: ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ಮುಕ್ತಾಯಗೊಂಡಿದೆ. ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ತೀರ್ಪು ನೀಡಿದ್ದಾರೆ. ಜೂ.4 ರಂದು ಭಾರತೀಯ ಚುನಾವಣಾ ಆಯೋಗವು ಅಂತಿಮ ಫಲಿತಾಂಶ ಪ್ರಕಟಿಸಲಿದೆ. ಅದಕ್ಕೂ ಮುನ್ನ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿವೆ. ಸಮೀಕ್ಷೆಗಳಲ್ಲಿ ಕರ್ನಾಟಕದ ಚಿತ್ರಣ ಹೀಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರ ಹಿಡಿಯಿತು. ಇದು ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬದಲಾವಣೆ ತರಬಹುದು ಎಂದು ಸಮೀಕ್ಷೆಗಳು ಹೇಳಿವೆ. ಬಿಜೆಪಿ 20 ರ ಗಡಿ ದಾಟಿದೆ. ಕಾಂಗ್ರೆಸ್‌ ಗೆಲುವಿನ ಸ್ಥಾನಗಳಲ್ಲಿ ಹೆಚ್ಚಳ ಕಂಡಿದೆ.

ಇಂಡಿಯಾ ಟಿವಿ ಬಿಜೆಪಿಗೆ 18 – 22, ಕಾಂಗ್ರೆಸ್: 4 – 8, ಜೆಡಿಎಸ್: 1‌ – 3 ಸ್ಥಾನ ನೀಡಿದೆ.

ಪೋಲ್‌ ಹಬ್‌ ಬಿಜೆಪಿಗೆ – 21 – 24, ಕಾಂಗ್ರೆಸ್ – 3 – 7, ಜೆಡಿಎಸ್ – 1 – 2 ಸ್ಥಾನಗಳನ್ನು ಕೊಟ್ಟಿದೆ.

ಪೋಲ್‌ ಸ್ಟ್ರಾಟ್‌ ಬಿಜೆಪಿಗೆ 21 – 24, ಕಾಂಗ್ರೆಸ್ – 3 – 7, ಜೆಡಿಎಸ್‌ಗೆ 1 – 2 ಸ್ಥಾನ ನೀಡಿದೆ.

ಸಿಎನ್‌ಎನ್‌ ಬಿಜೆಪಿ 21 – 24, ಕಾಂಗ್ರೆಸ್ 3 – 7, ಜೆಡಿಎಸ್ 1 – 2 ಸೀಟ್‌ ನೀಡಿದೆ.

ಜನ್‌ ಕಿ ಬಾತ್‌ ಬಿಜೆಪಿಗೆ 21 – 23, ಕಾಂಗ್ರೆಸ್‌ 7 – 5, ಇತರೆ – 0 ಸ್ಥಾನ ನೀಡಿದೆ.

2019 ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್‌ 1, ಜೆಡಿಎಸ್‌ 1 ಹಾಗೂ ಪಕ್ಷೇತರ ಒಂದು ಸ್ಥಾನ ಬಂದಿತ್ತು.

Share This Article