ಬಿಹಾರದಲ್ಲಿ ರಾಹುಲ್‌ ಪ್ರಚಾರದ ವೇಳೆ ಕುಸಿದ ವೇದಿಕೆ

Public TV
1 Min Read

ಪಾಟ್ನಾ: ಬಿಹಾರದಲ್ಲಿ (Bihar) ರಾಹುಲ್‌ ಗಾಂಧಿ (Rahul Gandhi) ಪ್ರಚಾರ ಮಾಡಲು ಮುಂದಾದಾಗ ವೇದಿಕೆಯ ಒಂದು ಭಾಗ ಕುಸಿದ ಘಟನೆ ನಡೆದಿದೆ.

ಇಂದು ಬಿಹಾರ ಮಾಜಿ ಸಿಎಂ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ (Misa Bharti) ಅವರ ಪರವಾಗಿ ಪ್ರಚಾರ ಮಾಡಲು ಗಾಂಧಿ ಅವರು ಪಾಟ್ನಾ ಹೊರವಲಯದಲ್ಲಿರುವ ಪಾಲಿಗಂಜ್‌ಗೆ ಆಗಮಿಸಿದ್ದರು. ಇದನ್ನೂ ಓದಿ: ಇವಿಎಂ ಯಂತ್ರಗಳು ಏನು ಆಗದೇ ಹೋದರೆ ಸರಿ, ಜನ ನಮ್ಮ ಪರವಾಗಿದ್ದಾರೆ: ಡಿಕೆಶಿ

ಮಿಸಾ ಭಾರತಿ ಅವರ ಕೈಯನ್ನು ಹಿಡಿದು ಮೇಲಕ್ಕೆ ಎತ್ತಲು ಮುಂದಾದಾಗ ವೇದಿಕೆ ಒಂದು ಭಾಗ ಕುಸಿದಿದೆ. ಈ ವೇಳೆ ಸಮತೋಲನ ಸಾಧಿಸಿದ ರಾಹುಲ್‌ ಗಾಂಧಿ ನಗುತ್ತಾ ಅಭಿಮಾನಿಗಳ ಮುಂದೆ ಕೈಯನ್ನು ಬೀಸತೊಡಗಿದರು. ನಂತರ ಭದ್ರತಾ ಸಿಬ್ಬಂದಿ ಸಹಾಯದಿಂದ ರಾಹುಲ್‌ ಮತ್ತು ಅತಿಥಿಗಳು ನಿಧಾನವಾಗಿ ಹೆಜ್ಜೆ ಹಾಕಿ ಪಾರಾದರು.

ಮಿಸಾ ಭಾರತಿ ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಜೂನ್‌ 1 ರಂದು ಮತದಾನ ನಡೆಯಲಿದೆ.

Share This Article