ಯೂಟ್ಯೂಬರ್ ಧ್ರುವ್ ರಾಠಿ ವಿಡಿಯೋ ಬಳಿಕ ಅತ್ಯಾಚಾರ, ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

Public TV
2 Min Read

ನವದೆಹಲಿ: ಆಪ್ (AAP) ನಾಯಕರು ಮತ್ತು ಸ್ವಯಂಸೇವಕರಿಂದ ನನ್ನ ಚಾರಿತ್ರ್ಯ ಹರಣದ ಅಭಿಯಾನದ ನಂತರ ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಆಪ್ ಸಂಸದೆ ಸ್ವಾತಿ ಮಲಿವಾಲ್ (Swati Maliwal‌) ಹೇಳಿದ್ದಾರೆ. ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ತನ್ನ ವಿರುದ್ಧ ಏಕಪಕ್ಷೀಯವಾಗಿ ವಿಡಿಯೊವನ್ನು ಪೋಸ್ಟ್ ಮಾಡಿದ ನಂತರ ಈ ಬೆದರಿಕೆ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಧ್ರುವ್ ರಾಠಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಅವರು ತನ್ನ ಕರೆಗಳು ಮತ್ತು ಸಂದೇಶಗಳನ್ನು ನಿರ್ಲಕ್ಷಿಸಿದ್ದಾರೆ. ಸ್ವತಂತ್ರ ಪತ್ರಕರ್ತರು ಎಂದು ಹೇಳಿಕೊಳ್ಳುವ ಇವರು, ಇತರ ಎಎಪಿ ವಕ್ತಾರರಂತೆ ವರ್ತಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಈಗ ತೀವ್ರ ನಿಂದನೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ. ನನ್ನ ದೂರನ್ನು ಹಿಂಪಡೆಯುವಂತೆ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್‌ ಪ್ರಕರಣ – ಕೇಜ್ರಿವಾಲ್‌ ಆಪ್ತನಿಗೆ 4 ದಿನ ನ್ಯಾಯಾಂಗ ಬಂಧನ

ಧ್ರುವ್ ರಾಠಿ ಅವರ 2.5 ನಿಮಿಷಗಳ ವೀಡಿಯೊದಲ್ಲಿ ನಿರ್ಲಕ್ಷಿಸಲಾಗಿದೆ ಎನ್ನಲಾದ ಹಲವಾರು ಅಂಶಗಳನ್ನು ಸ್ವಾತಿ ಮಲಿವಾಲ್ ಪಟ್ಟಿ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಒಪ್ಪಿಕೊಂಡ ನಂತರ ಎಎಪಿ ಏಕೆ ಯು-ಟರ್ನ್ ತೆಗೆದುಕೊಂಡಿತು? ವೈದ್ಯಕೀಯ ವರದಿಯಲ್ಲಿ ಹಲ್ಲೆಯಿಂದಾದ ಗಾಯಗಳನ್ನು ಬಹಿರಂಗಪಡಿಸುತ್ತದೆ. ನಾನು ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದೆ. ಇದಾದ ನಂತರ ಆರೋಪಿಯ ಫೋನ್‍ನ್ನು ಫಾಮ್ರ್ಯಾಟ್ ಮಾಡಲಾಗಿದೆ. ಆರೋಪಿಯನ್ನು ಕೃತ್ಯ ನಡೆದ ಸ್ಥಳದಿಂದ (ಸಿಎಂ ಮನೆ) ಬಂಧಿಸಲಾಗಿದೆ. ಭದ್ರತೆಯಿಲ್ಲದೆ ಒಂಟಿಯಾಗಿ ಮಣಿಪುರಕ್ಕೆ ಹೋದ ಮಹಿಳೆಯನ್ನು ಬಿಜೆಪಿಯಿಂದ (BJP) ಹೇಗೆ ಕೊಂಡುಕೊಳ್ಳಲು ಸಾಧ್ಯ? ಈ ವಿಚಾರವನ್ನು ಧ್ರುವ ರಾಠಿ ವಿಡಿಯೋದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಸ್ವಾತಿ ಹೇಳಿಕೊಂಡಿದ್ದಾರೆ.

ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಸಂದರ್ಭದಲ್ಲಿ, ನನಗೆ ಏನಾದರೂ ಸಂಭವಿಸಿದರೆ, ಅದನ್ನು ಪ್ರಚೋದಿಸಿದವರು ಯಾರು ಎಂದು ನಮಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್ ಅವರನ್ನು ಮೇ 18 ರಂದು ಬಂಧಿಸಲಾಯಿತು. ಬಿಭವ್ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಉತ್ತರ ಕೇಳಿದೆ. ಇದನ್ನೂ ಓದಿ: ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸ್ವಾತಿ ಮಲಿವಾಲ್‌

Share This Article