ಅಕ್ಟೋಬರ್‌ 11 ಕ್ಕೆ ‘ಮಾರ್ಟಿನ್’‌ ಸಿನಿಮಾ ತೆರೆಗೆ

By
1 Min Read

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ‘ಮಾರ್ಟಿನ್‌’ (Martin) ಚಿತ್ರತಂಡ ಗುಡ್‌ ನ್ಯೂಸ್‌ ಕೊಟ್ಟಿದೆ. ಇದೇ ಅಕ್ಟೋಬರ್‌ 11 ಕ್ಕೆ ಮಾರ್ಟಿನ್‌ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಬೆಂಗಳೂರಿನ ಸ್ಟಾರ್‌ ಹೋಟೆಲ್‌ವೊಂದರಲ್ಲಿ ಮಾರ್ಟಿನ್‌ ಸಿನಿಮಾದ ಸುದ್ದಿಗೋಷ್ಠಿ ಶುಕ್ರವಾರ ನಡೆಯಿತು. ಈ ವೇಳೆ ಚಿತ್ರತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಿದೆ. ಇದನ್ನೂ ಓದಿ: ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

ಧ್ರುವ ಸರ್ಜಾ ಅಭಿನಯದ 5ನೇ ಚಿತ್ರ ಮಾರ್ಟಿನ್. ಎ.ಪಿ.ಅರ್ಜುನ್ ನಿರ್ದೇಶನದ ಮಾರ್ಟಿನ್ 5 ಭಾಷೆಯಲ್ಲಿ ರಿಲೀಸ್ ಆಗಲಿದೆ. ಆ ಮೂಲಕ 2024 ರ ಹೈವೋಲ್ಟೇಜ್ ಸಿನಿಮಾ ಇದಾಗಲಿದೆ.

ಪೊಗರು ಸಿನಿಮಾ ಬಳಿಕ 3 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಚಾಮುಂಡೇಶ್ವರಿ ದರ್ಶನ ಪಡೆದ ಡಿಬಾಸ್

Share This Article