ದೇವರಾಜೇಗೌಡ ಪರಿಚಯವೇ ನನಗೆ ಇಲ್ಲ, ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ: ಸಚಿವ ಚಲುವರಾಯಸ್ವಾಮಿ

By
2 Min Read

ಬೆಂಗಳೂರು: ದೇವರಾಜೇಗೌಡ (Devarajegowda) ಪರಿಚಯವೇ ನನಗೆ ಇಲ್ಲ. ಬೌರಿಂಗ್‌ ಕ್ಲಬ್‌ಗೆ ಊಟಕ್ಕೆ ಹೋಗಿದ್ದೆ ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ತಿಳಿಸಿದರು.

ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಡಿಕೆಶಿ ನಮ್ಮ ಜೊತೆ ಮಾತಾಡಿಯೂ ಇಲ್ಲ. ದೇವರಾಜೇಗೌಡಗೂ ನನಗೂ ಸಂಬಂಧ ಇಲ್ಲ. ನಮ್ಮ ಬಗ್ಗೆ ಮಾತಾನಾಡುವ ನೈತಿಕ ಹಕ್ಕಿಲ್ಲ. ದೇವರಾಜೇಗೌಡ ಗೌರವಸ್ಥ ಅಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ದೇವರಾಜೇಗೌಡ ಸಕ್ರಿಯ ಬಿಜೆಪಿ ಕಾರ್ಯಕರ್ತ, ಅವರ ಆರೋಪ ರಾಜಕೀಯ ಪ್ರೇರಿತ: ರಾಮಲಿಂಗಾರೆಡ್ಡಿ

ದೇವರಾಜೇಗೌಡ ಮುಖವನ್ನು ನಾನು ಟಿವಿಯಲ್ಲೇ ನೋಡಿದ್ದು. ಈ ಮೊದಲು ದೇವರಾಜೇಗೌಡ, ಗೌಡರ ಕುಟುಂಬದ ವಿರುದ್ಧ ಹೋರಾಡಿದ್ದ. ಈಗ ಪರ ಮಾತಾಡ್ತಿದ್ದಾನೆ ಅಂದ್ರೆ ಏನು? ನಾನು ಬೌರಿಂಗ್ ಕ್ಲಬ್‌ಗೆ ಊಟಕ್ಕೆ ಒಂದು ಸಲ ಹೋಗಿದ್ದೆ. ಅದು ಎಲೆಕ್ಷನ್‌ಗೂ ಮುಂಚೆ ಫೆಬ್ರವರಿಯಲ್ಲಿ ಹೋಗಿದ್ದೆ. ಗೋಪಾಲಸ್ವಾಮಿ ನಮ್ಮ ಪಕ್ಷದ ಮಾಜಿ ಎಂಎಲ್‌ಸಿ, ದೇವರಾಜೇಗೌಡ ಆರೋಪದ ತನಿಖೆ ಬಗ್ಗೆ ಮಾತಾಡೋದಕ್ಕೆ ನಾನು ಗೃಹ ಸಚಿವ ಅಲ್ಲ, ಸಿಎಂ ಕೂಡ ಅಲ್ಲ. ಹಾಗಾಗಿ ಎಸ್‌ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಇದೇ ವೇಳೆ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಶಿವರಾಮೇಗೌಡ, ದೇವರಾಜೇಗೌಡಗೆ ಕರೆ ಮಾಡಿದ್ದು ನನಗೆ ಸಂಬಂಧ ಇಲ್ಲ. ಅದನ್ನೂ ಕೂಡ ನಾನು ಒಪ್ಪುವುದಿಲ್ಲ. ಶಿವರಾಮೇಗೌಡ ಫೋನ್ ಕೊಟ್ಟಾಗ ಡಿಕೆಶಿ ಮಾತಾಡಿದ್ದು ಸೂಕ್ತ ಅಲ್ಲ. ಒಬ್ಬ ಜವಾಬ್ದಾರಿಯುತ ಡಿಸಿಎಂ ಆ ಪರಿಸ್ಥಿತಿಯಲ್ಲಿ ಫೋನ್ ತೆಗೆದುಕೊಂಡಿರಬಹುದು. ಶಿವರಾಮೇಗೌಡ ಹಾಗೂ ದೇವರಾಜೇಗೌಡ ಇಬ್ಬರೂ ನನಗೆ ಸಂಬಂಧ ಇಲ್ಲದೋರು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ – ಬಿಜೆಪಿಯಿಂದ ಡಿಜಿಪಿಗೆ ದೂರು

ಕುಮಾರಸ್ವಾಮಿ ಅವರು ದಿನಾ ಮಾತಾಡೋದನ್ನ ಬಿಡಲಿ. ಮೊದಲು ಪ್ರಜ್ವಲ್ ರೇವಣ್ಣ ಕರೆಸಲಿ. ದೇವೇಗೌಡರಿಗೆ ನೋವಾದರೆ, ಮಗ ಆಗಿ ಅವರಿಗೆ ಮಾತ್ರ ನೋವಾಗಲ್ಲ. ನಮಗೂ ನೋವಾಗಿದೆ. ಕುಮಾರಸ್ವಾಮಿ, ರೇವಣ್ಣ ಅವರು ಮೊದಲು ಪ್ರಜ್ವಲ್ ಕರೆಸಲಿ. ರೇವಣ್ಣ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೀತಾ ಇದೆ. ಆರೋಪ ಮುಕ್ತವಾದ್ರೆ ನಮ್ಮದೇನೂ ತಕರಾರು ಇಲ್ಲ ಎಂದರು.

Share This Article