ಆಸ್ತಿ ಮಾರಿದ ಹಣಕ್ಕಾಗಿ ಮಲಗಿದ್ದ ಮಗನನ್ನೇ ಹತ್ಯೆಗೈದ ಪಾಪಿ ತಂದೆ

By
1 Min Read

ರಾಮನಗರ: ಜಮೀನು ಮಾರಿದ ಹಣದ ವಿಚಾರಕ್ಕೆ ತಂದೆಯೇ ಮಗನನ್ನು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ತಾಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಭಾಸ್ಕರ್ (31) ಎಂದು ಗರುತಿಸಲಾಗಿದೆ. ಕೊಲೆಯಾದವನ ತಂದೆ ಕೃಷ್ಣಪ್ಪ (60) ಹತ್ಯೆಗೈದ ಆರೋಪಿಯಾಗಿದ್ದಾನೆ. ಆರೋಪಿ ಹಾಗೂ ಆತನ ಮಗ ಜಮೀನು ಮಾರಿದ ಹಣದ ವಿಚಾರಕ್ಕೆ ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅದೇ ರೀತಿ ಶುಕ್ರವಾರ ರಾತ್ರಿ ಕೂಡ ಗಲಾಟೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಮಗ ಮಲಗಿದ್ದಾಗ ಆರೋಪಿ ಮಚ್ಚಿನಿಂದ ತಲೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Share This Article