ಕಾನ್ಸ್ ರೆಡ್ ಕಾರ್ಪೆಟ್- ದೀಪಿಕಾ ಪಡುಕೋಣೆ ಸ್ಟೈಲ್ ಕಾಪಿ ಮಾಡಿದ ಊರ್ವಶಿ

Public TV
1 Min Read

ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್ (Cannes Film Festival 2024) ಈಗಾಗಲೇ ಆರಂಭವಾಗಿದೆ. ಎಲ್ಲಾ ಚಿತ್ರರಂಗದ ಸ್ಟಾರ್ ನಟ-ನಟಿಯರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುತ್ತಿದ್ದಾರೆ. ಇದರ ನಡುವೆ ಕನ್ನಡದ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ (Urvashi Rautela) ಸ್ಟೈಲ್ ಎಲ್ಲರ ಗಮನ ಸೆಳೆದಿದೆ. ಜೊತೆಗೆ ದೀಪಿಕಾ ಪಡುಕೋಣೆ (Deepika Padukone) ಸ್ಟೈಲ್ ಅನ್ನೇ ಊರ್ವಶಿ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಕಾನ್ಸ್ ಚಲನಚಿತ್ರೋತ್ಸವದ ಮೊದಲ ದಿನವೇ ‘ಐರಾವತ’ ನಟಿ ಎಂಟ್ರಿ ಕೊಟ್ಟಿದ್ದಾರೆ. ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಮುದ್ದಾದ ನಗು ಬೀರಿದ್ದಾರೆ. ಬಾರ್ಬಿ ಡಾಲನಂತೆ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾದ ಶೂಟಿಂಗ್ ಮುಗಿಸಿದ ಕಿಚ್ಚ ಸುದೀಪ್

ಊರ್ವಶಿ ಧರಿಸಿದ ಪಿಂಕ್ ಬಣ್ಣದ ಗೌನ್ ಅನ್ನು ದೀಪಿಕಾ ಪಡುಕೋಣೆ ಧರಿಸಿದ ಉಡುಗೆಗೆ ಹೋಲಿಸಿದ್ದಾರೆ ನೆಟ್ಟಿಗರು. 2018ರಲ್ಲಿ ನಡೆದ ಕಾನ್ಸ್ ಫಿಲ್ಮ್ಸ್ ಫೆಸ್ಟಿವಲ್‌ನಲ್ಲಿ ದೀಪಿಕಾ ಪಿಂಕ್ ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ರೀತಿ ಗೆಟಪ್‌ನಲ್ಲಿ ಊರ್ವಶಿ ಕೂಡ ಹೋಲುತ್ತಿರೋದನ್ನು ನೋಡಿ ದೀಪಿಕಾ ಸ್ಟೈಲ್ ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.


ಸದ್ಯ ಬಾಲಯ್ಯ ಜೊತೆ ಹೊಸ ಸಿನಿಮಾದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಸೌತ್ ಮತ್ತು ಹಿಂದಿ ಸಿನಿಮಾಗಳು ಊರ್ವಶಿ ಕೈಯಲ್ಲಿವೆ.

Share This Article