ಸಿಎಎ ಅಡಿಯಲ್ಲಿ 14 ಜನರಿಗೆ ಮೊದಲ ಬಾರಿಗೆ ಪೌರತ್ವ ಪ್ರಮಾಣ ಪತ್ರ ಹಸ್ತಾಂತರ

By
1 Min Read

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (CAA) ಅಧಿಕೃತವಾಗಿ ಜಾರಿಯಾದ ಬಳಿಕ 14 ಜನರಿಗೆ ಮೊದಲ ಬಾರಿಗೆ ಪೌರತ್ವ ಪ್ರಮಾಣ ಪತ್ರವನ್ನು ಕೇಂದ್ರ ಗೃಹ ಇಲಾಖೆ ನೀಡಿದೆ.

ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ ಪ್ರಮಾಣ ಪತ್ರ ವಿತರಿಸಿದರು. ಮೊದಲ ಹಂತದಲ್ಲಿ 14 ಮಂದಿ ಒಳಗೊಂಡಂತೆ 300 ಮಂದಿಗೆ ಪೌರತ್ವ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದಕ್ಕಾಗಿ ತಯಾರಿಸಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದ 14 ಜನರ ಅರ್ಜಿಗಳ ಪ್ರಕ್ರಿಯೆಯನ್ನು ಅಜಯ್ ಭಲ್ಲಾ ಪೂರ್ಣಗೊಳಿಸಿದರು. ಇದನ್ನೂ ಓದಿ: ಮೋದಿ ಬೀಳ್ಕೊಡುಗೆಗೆ ದೇಶದ ಜನರು ಸಿದ್ಧವಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

2014 ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ಡಿಸೆಂಬರ್ 2019 ರಲ್ಲಿ CAA ಅನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ಹಿಂದೂಗಳು, ಸಿಖ್‌ಗಳು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದ್ದಾರೆ.

ಸಂಸತ್‌ನಲ್ಲಿ ಅನುಮೋದನೆ ಪಡೆದ ನಾಲ್ಕು ವರ್ಷದ ಬಳಿಕ ಕಳೆದ ಮಾರ್ಚ್ 11 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನೂ ಓದಿ: ಪಿಒಕೆ ಭಾರತದ ಭಾಗ, ಮರಳಿ ಪಡೆದೇ ಪಡೆಯುತ್ತೇವೆ – ಬಂಗಾಳದಲ್ಲಿ ಅಮಿತ್ ಶಾ ಗುಡುಗು

Share This Article