ಕ್ರಿಕೆಟ್ ಬಾಲ್‌ನಂತೆ ಕಾಣುವ ಡ್ರೆಸ್‌ನಲ್ಲಿ ಜಾನ್ವಿ ಕಪೂರ್ ಮಿಂಚಿಂಗ್

Public TV
1 Min Read

ಬಾಲಿವುಡ್ ಬೆಡಗಿ ಜಾನ್ವಿ ಕಪೂರ್‌ಗೆ (Janhvi Kapoor) ಇದೀಗ ಬೇಡಿಕೆ ಹೆಚ್ಚಾಗಿದೆ. ಹಿಂದಿ ಮತ್ತು ತೆಲುಗಿನಲ್ಲಿ ಬ್ಯುಸಿ ನಟಿಯಾಗಿ ಜಾನ್ವಿ ಸದ್ದು ಮಾಡುತ್ತಿದ್ದಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಕ್ರಿಕೆಟ್ ಥೀಮ್ ಡ್ರೆಸ್‌ನಲ್ಲಿ ಜಾನ್ವಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಜಾನ್ವಿ ಹೊಸ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇದನ್ನೂ ಓದಿ:ಹೆಸರಾಂತ ನಿರ್ದೇಶಕಿ ರೂಪಾ ಅಯ್ಯರ್ ಗೆ ದೋಖಾ: ಡಿಜಿಟಲ್ ಅರೆಸ್ಟ್

‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರತಿಭಾನ್ವಿತ ನಟ ರಾಜ್‌ಕುಮಾರ್ ರಾವ್‌ಗೆ ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದ ಜಾನ್ವಿ ಧರಿಸಿರುವ ಡ್ರೆಸ್ ಹೈಲೆಟ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಜಾಹ್ನವಿ ಕಪೂರ್ ಮತ್ತು ರಾಜ್‌ಕುಮಾರ್ ರಾವ್ (Rajkumar Rao) ಒಟ್ಟಾಗಿ ಇರುವುದು ಕಾಣಬಹುದು. ಇದ್ದಕ್ಕಿದ್ದಂತೆ ರಾಜ್‌ಕುಮಾರ್ ರಾವ್ ಅವರು ನಟಿಯನ್ನು ತಿರುಗಿಸಿ ಅವರ ಉಡುಗೆಗೆ ಜೋಡಿಸಲಾದ ಕೆಂಪು ಬಣ್ಣದ ಕ್ರಿಕೆಟ್ ಬಾಲ್‌ಗಳ ಸಾಲನ್ನು ಕ್ಯಾಮೆರಾಗೆ ತೋರಿಸಿದರು. ಹೀರೋ ನಡೆಗೆ ಜಾನ್ವಿ ಕೂಡ ಸ್ಮೈಲ್ ಮಾಡುತ್ತಿದ್ದರು. ಅನೇಕರು ಜಾನ್ವಿ ಕಪೂರ್ ಹೊಸ ಫ್ಯಾಷನ್‌ ನೋಡಿ ಹಾಡಿ ಹೊಗಳಿದ್ದಾರೆ.

 

View this post on Instagram

 

A post shared by Viral Bhayani (@viralbhayani)

‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಚಿತ್ರದ ಟ್ರೈಲರ್ ಮೇ ಎರಡನೇ ವಾರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಈ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜಾನ್ವಿ ಮಹಿಮಾ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸಿದ್ದಾರೆ.

ಅಂದಹಾಗೆ, ಜ್ಯೂ.ಎನ್‌ಟಿಆರ್ ಜೊತೆ ‘ದೇವರ’ (Devara Film), ರಾಮ್ ಚರಣ್ ಜೊತೆ ಹೊಸ ಚಿತ್ರ, ವರುಣ್ ಧವನ್ (Varun Dhawan) ಜೊತೆ ಮತ್ತೆ ಹೊಸ ಚಿತ್ರ ಮಾಡಲು ನಟಿ ಒಪ್ಪಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್‌ಗಳ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

Share This Article