ಎದೆ ಮೇಲೆ ಕಲ್ಲು ಎತ್ತಾಕಿ ಪತ್ನಿಯ ಕೊಂದ ಪತಿ!

Public TV
1 Min Read

ಕೋಲಾರ: ಕುಡಿದ ಅಮಲಿನಲ್ಲಿ ಪತಿ ಮಹಾಶಯನೋರ್ವ ಪತ್ನಿಯನ್ನೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ದುಡ್ಡಿಗಾನಹಳ್ಳಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಲಕ್ಷ್ಮಮ್ಮ (55) ಕೊಲೆಯಾದ ದುರ್ದೈವಿಯಾಗಿದ್ದು, ಈಕೆಯನ್ನು ಪತಿ ರಾಮಪ್ಪ (60) ಕೊಲೆ ಮಾಡಿದ್ದಾನೆ.

ರಾಮಪ್ಪ ಕುಡಿದು ಬಂದು ಪತ್ನಿಯೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ. ಅಲ್ಲದೆ ಇಬ್ಬರು ಸಹ ಆಗಾಗ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ರಾತ್ರಿ ಗಲಾಟೆ ತಾರಕಕ್ಕೇರಿ ಪತ್ನಿಯ ಎದೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.

ಈ ಸಂಬಂಧ ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು

Share This Article