4 ವರ್ಷದ ಮಗಳು ಹಲ್ಲುಜ್ಜಿಲ್ಲ ಎಂದು ಹೊಟ್ಟೆಗೆ ಒದ್ದು ಸಾಯಿಸಿದ್ಳು ತಾಯಿ!

Public TV
1 Min Read

ವಾಷಿಂಗ್ಟನ್: ಮಗಳು ಹಲ್ಲು ಉಜ್ಜಿಲ್ಲ ಎಂದು ಸಿಟ್ಟಾದ ತಾಯಿಯೊಬ್ಬಳು ತನ್ನ ನಾಲ್ಕು ವರ್ಷದ ಹೆಣ್ಣು ಮಗುವನ್ನು ಒದ್ದು ಸಾಯಿಸಿದ್ದಾಳೆ. ಈ ಘಟನೆ ಮೇರಿಲ್ಯಾಂಡ್‍ನ ಗೈತರ್‍ಬರ್ಗ್‍ನಲ್ಲಿ ನಡೆದಿದೆ. ಆದರೆ ಇಷ್ಟೆಲ್ಲಾ ಮಾಡಿದ ತಾಯಿ ಮೊದಲು ತನಗೇನೂ ತಿಳಿದೇ ಇಲ್ಲ ಎಂಬಂತೆ ನಾಟಕವಾಡಿದ್ದಾಳೆ. ಕೊನೆಗೆ ಪೊಲೀಸ್ ತನಿಖೆ ವೇಳೆ ತನ್ನ ದುಷ್ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ಆಗಿದ್ದೇನು?: ಐರಿಸ್ ಹೆರ್ನಾಂಡಿಸ್ ರಿವಾಸ್ ಎಂಬ 20 ವರ್ಷ ತಾಯಿ ತನ್ನ 4 ವರ್ಷದ ನೋಹ್ಲಿ ಅಲೆಕ್ಸಾಂಡ್ರಾ ಮಾರ್ಟಿಸ್ ಹೆರ್ನಾಂಡಿಸ್‍ಳನ್ನು ಕೊಂದ ತಾಯಿ. ಮೇರಿಲ್ಯಾಂಡ್‍ನ ನಿವಾಸದಲ್ಲಿ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತಾಯಿಯೇ ಪೊಲೀಸರಿಗೆ ಫೋನ್ ಮಾಡಿ ವಿವರ ತಿಳಿಸಿದ್ದಾಳೆ. ಆದರೆ ಮಗುವನ್ನು ಆಸ್ಪತ್ರೆಗೆ ತಲುಪಿಸುವ ಮುನ್ನವೇ ಪ್ರಾಣಪಕ್ಷಿ ಹಾರಿಹೋಗಿತ್ತು.

ಪೊಲೀಸರು ಹೇಳಿದ್ದೇನು?: ಸ್ನಾನ ಮಾಡಲು ಹೋಗಿದ್ದ ಮಗಳು 15-20 ನಿಮಿಷ ಕಳೆದ ಬಳಿಕವೂ ಬಾರದೇ ಇರುವುದನ್ನು ಗಮನಿಸಿದ ತಾಯಿ ಬಾತ್‍ರೂಮ್‍ಗೆ ಹೋಗಿ ನೋಡಿದ್ದಾಳೆ. ಈ ವೇಳೆ ಬಾತ್ ಟಬ್‍ನಲ್ಲಿ ಮಗು ಉಲ್ಟಾ ಮಲಗಿತ್ತು. ಇದಾಗಿ 1 ಗಂಟೆ ಬಳಿಕ ತಾಯಿ ಸಹಾಯವಾಣಿ ಸಂಖ್ಯೆ 911 ಸಂಖ್ಯೆಗೆ ಕರೆಮಾಡಿದ್ದಾಳೆ. ತಕ್ಷಣ ಮಗುವನ್ನು 911 ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದರು. ಮಗುವಿನಲ್ಲಿ ದೇಹದಲ್ಲಿ ಸುಮಾರು ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ತಲೆಗೆ ಕೂಡಾ ಗಾಯವಾಗಿದೆ ಎಂದು ಹೇಳಿದರು. ಇದಾದ ಬಳಿಕ ಮಗುವನ್ನು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮೆಡಿಕಲ್ ಸೆಂಟರ್‍ಗೆ ಸೇರಿಸಿದ್ದೇವೆ. ಗಂಭೀರ ಸ್ಥಿತಿಯಲ್ಲಿದ್ದ ಮಗು ಅಲ್ಲಿ ಸಾವನ್ನಪ್ಪಿದೆ.

ಇದಾದ ಬಳಿಕ ಪೊಲೀಸರು ಅನುಮಾನದಿಂದ ಮಗುವಿನ ತಾಯಿಯ ವಿಚಾರಣೆ ಆರಂಭಿಸಿದ್ದಾರೆ. ಆ ವೇಳೆ ಮಗಳು ಬೆಳಗ್ಗೆ ಹಲ್ಲುಜ್ಜಿಲ್ಲ ಎಂದು ಸಿಟ್ಟಿನಿಂದ ನಾನು ಮಗಳ ಹೊಟ್ಟೆಗೆ ಬಲವಾಗಿ ಒದ್ದಿದ್ದೆ. ನಾನು ಒದ್ದ ರಭಸಕ್ಕೆ ಮಗುವಿನ ತಲೆ ಹೋಗಿ ಗೋಡೆಗೆ ಬಡಿಯಿತು. ಈ ವೇಳೆ ಮಗಳು ಕುಸಿದು ಬಿದ್ದಳು ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಹೀಗೆ ಪ್ರಕರಣ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *