ಪ್ರೆಗ್ನೆನ್ಸಿ ಬಗ್ಗೆ ಸಿಹಿಸುದ್ದಿ ಕೊಟ್ಟ ಕವಿತಾ, ಚಂದನ್ ದಂಪತಿ

Public TV
1 Min Read

ಬಿಗ್‌ ಬಾಸ್‌ (Bigg Boss), ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಮೂಲಕ ಮೋಡಿ ಮಾಡಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ (Chandan Kumar) ದಂಪತಿ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಕವಿತಾ ತಾಯಿಯಾಗ್ತಿದ್ದಾರೆ. ಪ್ರೆಗ್ನೆನ್ಸಿ ಬಗ್ಗೆ ಚಂದನ್ ದಂಪತಿ ಅನೌನ್ಸ್ ಮಾಡಿದ್ದಾರೆ.

ಇಮೋಜಿ ಒಳಗೆ ಸ್ಕ್ಯಾನಿಂಗ್ ಫೋಟೋ ಹಾಕಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಹೇಳುತ್ತಿದ್ದಂತೆ ಸ್ಯಾಂಡಲ್‌ವುಡ್ ಕಲಾವಿದರು, ಆಪ್ತರು, ಅಭಿಮಾನಿಗಳು ಶುಭಕೋರಿದ್ದಾರೆ.

 

View this post on Instagram

 

A post shared by K A V I T H A (@iam.kavitha_official)

ಕವಿತಾ ಗೌಡ ಮತ್ತು ಚಂದನ್ ನಟನೆಯ ಜೊತೆಗೆ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ಆನ್‌ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ಜ್ಯೋತಿಕಾ- ಟ್ರೋಲ್‌ ಆದ ಸೂರ್ಯ ಪತ್ನಿ

ಅಂದಹಾಗೆ, ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಜೋಡಿಯಾಗಿ ಕವಿತಾ(Kavitha Gowda), ಚಂದನ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಲಾಕ್‌ಡೌನ್ ವೇಳೆ, 2021ರಲ್ಲಿ ಇಬ್ಬರೂ ಹಸೆಮಣೆ ಏರಿದ್ದಾರೆ.

Share This Article