‘ಟಾಕ್ಸಿಕ್’ ಚಿತ್ರದ ಬಗ್ಗೆ ಸುಳಿವು ಕೊಟ್ರಾ ಯಶ್?

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ನಟನಾಗಿ ಮಾತ್ರವಲ್ಲ. ನಿರ್ಮಾಪಕನಾಗಿಯೂ ಸದ್ದು ಮಾಡುತ್ತಿದ್ದಾರೆ. ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ‘ಟಾಕ್ಸಿಕ್’ (Toxic Film) ಬಗ್ಗೆ ಸುಳಿವು ನೀಡುತ್ತಿದ್ದಾರಾ ಎಂದು ಫ್ಯಾನ್ಸ್ ಕುತೂಹಲದಿಂದ ನೋಡುತ್ತಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಕೆಲಸದಲ್ಲಿ ಯಶ್ ನಿರತರಾಗಿದ್ದಾರೆ. ‘ರಾಮಾಯಣ’ ಚಿತ್ರಕ್ಕೆ ನಿರ್ಮಾಪಕರಾಗಿಯೂ ಸಾಥ್ ನೀಡುತ್ತಿದ್ದಾರೆ. ‘ಕೆಜಿಎಫ್ 2’ (KGF 2) ಚಿತ್ರ ರಿಲೀಸ್ ಆಗಿ 2 ವರ್ಷಗಳ ನಂತರ ‘ಟಾಕ್ಸಿಕ್’ ಚಿತ್ರವನ್ನು ಯಶ್ ಅನೌನ್ಸ್ ಮಾಡಿದ್ದರು. ಆದರೆ ಆ ನಂತರ ಏನು ಅಪ್‌ಡೇಟ್ ಸಿಗದೇ ಬೇಸರದಲ್ಲಿದ್ದಾರೆ. ಇದನ್ನೂ ಓದಿ:ಸಂತೋಷ್ ಬಾಲರಾಜ್ ನಟನೆಯ ‘ಸತ್ಯಂ’ ಚಿತ್ರಕ್ಕೆ ಸೆನ್ಸಾರ್ ಮೆಚ್ಚುಗೆ!

ಇದೀಗ ಯಶ್, ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪೋಸ್ಟ್ ಮಾಡಬೇಕೇ? ಎಂದು ಇನ್ಸ್ಟಾಗ್ರಾಂನಲ್ಲಿ ಕೇಳಿದ್ದಾರೆ. ಹೌದು ಎಂಬ ಉತ್ತರ ಅಭಿಮಾನಿಗಳಿಂದ ಬಂದಿದೆ. ಈ ಪೋಸ್ಟ್‌ನಿಂದ ಯಶ್ ಪರೋಕ್ಷವಾಗಿ ‘ಟಾಕ್ಸಿಕ್’ ಬಗ್ಗೆ ಸುಳಿವು ನೀಡುತ್ತಿದ್ದಾರಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಟಾಕ್ಸಿಕ್’ ಬಗ್ಗೆ ಯಶ್ ಅವರೇ ಅಧಿಕೃತ ಮಾಹಿತಿ ನೀಡುತ್ತಾ? ಹೋಗ್ತಾರಾ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಎಲ್ಲದಕ್ಕೂ ಸದ್ಯದಲ್ಲೇ ಅಧಿಕೃತ ಮಾಹಿತಿ ಸಿಗಲಿದೆ.

Share This Article