Ramayana: ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ? ನಟಿ ಸ್ಪಷ್ಟನೆ

Public TV
1 Min Read

ಬಾಲಿವುಡ್‌ನ ‘ರಾಮಾಯಣ’ (Ramayana Film) ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor), ಸೀತೆಯಾಗಿ ಸಾಯಿ ಪಲ್ಲವಿ (Sai Pallavi) ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗೆ ಲಾರಾ ದತ್ತಾ ಸ್ಪಷ್ಟನೆ ನೀಡಿದ್ದಾರೆ.

‘ರಾಮಾಯಣ’ ಚಿತ್ರದಲ್ಲಿ ಕೈಕೇಯಿ ಪಾತ್ರದಲ್ಲಿ ನಟಿಸುತ್ತಿದ್ದೀರಾ? ಎಂಬ ಪ್ರಶ್ನೆ ನಟಿಗೆ ಸಂದರ್ಶನವೊಂದರಲ್ಲಿ ಎದುರಾಗಿದೆ. ನಾನು ಕೂಡ ಈ ಬಗ್ಗೆ ತುಂಬಾ ಕೇಳುತ್ತಿದ್ದೇನೆ. ನಾನು ಆ ಬಗ್ಗೆ ಓದಲು, ಕೇಳಲು ಇಷ್ಟಪಡುತ್ತೇನೆ. ಆದ್ದರಿಂದ ದಯವಿಟ್ಟು ಮುಂದುವರಿಸಿ ಎಂದು ಲಾರಾ ಮಾತನಾಡಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರ ಮಲ್ಲು’ ಟೀಸರ್ ರಿಲೀಸ್

ರಾಮಾಯಣದ (Ramayana Film) ಭಾಗವಾಗಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ ಚಿತ್ರದಲ್ಲಿ ನನಗೆ ಆಫರ್ ಕೊಟ್ರರೆ ನಾನು ನಟಿಸಲು ಇಷ್ಟಪಡುವ ಅನೇಕ ಪಾತ್ರಗಳಿವೆ. ಶೂರ್ಪನಖಿ, ಮಂಡೋದರಿ, ನಾನು ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಲು ಇಷ್ಟಪಡುತ್ತೇನೆ ಎಂದು ಲಾರಾ ಹೇಳಿದ್ದಾರೆ. ಆ ಮೂಲಕ ‘ರಾಮಾಯಣ’ ಚಿತ್ರದಲ್ಲಿ ನಟಿಸುವ ಬಗ್ಗೆ ಲಾರಾ (Lara Dutta) ಯಾವುದೇ ಖಚಿತ ಮಾಹಿತಿ ನೀಡಿಲ್ಲ.

‘ರಾಮಾಯಣ’ ಚಿತ್ರ ಬಿಗ್ ಬಜೆಟ್‌ನಲ್ಲಿ ಮೂಡಿ ಬರುತ್ತಿದೆ. ಸಿನಿಮಾ ನಿರ್ಮಾಣಕ್ಕೆ ‘ಕೆಜಿಎಫ್‌ 2’ (KGF 2) ನಟ ಯಶ್ (Yash) ಕೂಡ ಸಾಥ್ ನೀಡುತ್ತಿದ್ದಾರೆ.

Share This Article