ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

Public TV
1 Min Read

ರಾವಳಿ ಕುವರಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಕ್ಸಸ್‌ಗಾಗಿ ತಮಿಳು ರಿಮೇಕ್ ಸಿನಿಮಾದ ಮೊರೆ ಹೋಗಿದ್ದಾರೆ. ತಮಿಳಿನ ಸ್ಟಾರ್ ಜಯಂ ರವಿ ನಟಿಸಿರುವ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದ್ದು, ಯಶಸ್ಸಿಗಾಗಿ ಪೂಜಾ ಹೊಸ ಹೆಜ್ಜೆ ಇಟ್ಟಿದ್ದಾರೆ.

ಚಿತ್ರರಂಗದಲ್ಲಿ ಹಿಂದಿ ಸಿನಿಮಾಗಳಿಗಿಂತ ದಕ್ಷಿಣ ಸಿನಿಮಾಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ಹಾಗಾಗಿ ಸೌತ್‌ನಲ್ಲಿ ಈಗಾಗಲೇ ಹಿಟ್ ಆಗಿರುವ ಚಿತ್ರವನ್ನು ಬಾಲಿವುಡ್‌ನಲ್ಲಿ ತೋರಿಸಲು ಸ್ಕೆಚ್ ಹಾಕಿದ್ದಾರೆ. ಜಯಂ ರವಿ ಮತ್ತು ರಾಶಿ ಖನ್ನಾ ನಟನೆಯ ‘ಆದಂಗ ಮಾರು’ ಹಿಂದಿಯಲ್ಲಿ ಮೂಡಿ ಬರಲಿದೆ. ಇದನ್ನೂ ಓದಿ:ಲವ್ ‍ಬ್ರೇಕಪ್ ನಂತರ ಬೆನ್ನ ಮೇಲೆ ಟ್ಯಾಟೋ ಹಾಕಿಸಿಕೊಳ್ಳಲು ಶ್ರುತಿ ನಿರ್ಧಾರ

‘ಆದಂಗ ಮಾರು’ ಚಿತ್ರದ ಹಿಂದಿಗೆ ರಿಮೇಕ್‌ನಲ್ಲಿ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಸಂಕಿ’ (Sanki Film) ಎಂದು ಕೂಡ ಟೈಟಲ್ ಇಡಲಾಗಿದೆ. ಈ ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ.

ತಮಿಳಿನಲ್ಲಿ ಹಿಟ್ ಆಗಿರುವ ಸಿನಿಮಾ ಬಾಲಿವುಡ್‌ನಲ್ಲಿಯೂ ಹಿಟ್ ಆಗಲಿದೆ ಎಂಬ ಭರವಸೆಯಲ್ಲಿ ಈ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಬಾಲಿವುಡ್‌ ಸಂಕಿ ಚಿತ್ರ ಪೂಜಾ ಕೆರಿಯರ್‌ನಲ್ಲಿ ಅದೃಷ್ಟ ತಂದು ಕೊಡುತ್ತಾ? ಕಾದುನೋಡಬೇಕಿದೆ.

Share This Article