ಎಗ್ ಫ್ರೀಜಿಂಗ್ ವಿಡಿಯೋ ಹಂಚಿಕೊಂಡ ನಟಿ ಮೆಹ್ರೀನ್

Public TV
2 Min Read

ಬಾಲಿವುಡ್ ನಟಿ ಮೃಣಾಲ್ ಠಾಕೂರ್ (Mrunal Thakur) ಇತ್ತೀಚೆಗೆ ಎಗ್ ಪ್ರೀಜ್ ಮಾಡಿ ಮಗು ಪಡೆಯುವ ಬಗ್ಗೆ ತಮ್ಮ ಪ್ಲ್ಯಾನ್ ಅನ್ನು ತಿಳಿಸಿದ್ದರು. ಈ ಬೆನ್ನಲ್ಲೇ ತೆಲುಗು ನಟಿ ಮೆಹ್ರೀನ್ ಪಿರ್ಜಾದಾ (Mehreen Pirzada) ಕೂಡ ಎಗ್ ಫ್ರೀಜಿಂಗ್ ವಿಡಿಯೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

ನಟಿ ಮೆಹ್ರೀನ್ ಈಗ ಎಗ್ ಫ್ರೀಜಿಂಗ್ ಮಾಡಿಸಿದ್ದಾರೆ. ಹಂತ ಹಂತವಾಗಿ ತಾವು ಈ ಪ್ರತಿಕ್ರಿಯೆ ಒಳಗಾಗಿದ್ದು ಹೇಗೆ ಎಂದು ನಟಿ ವಿಡಿಯೋ ಮೂಲಕ ತೋರಿಸಿ ಕೊಟ್ಟಿದ್ದಾರೆ. 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದೆ. ಈಗ ಎಗ್ ಫ್ರೀಜಿಂಗ್ ಪ್ರಕ್ರಿಯೆ ಮುಗಿದಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ. ಆದರೆ ಇದು ನನ್ನ ವೈಯಕ್ತಿಕ ವಿಚಾರ ಅಲ್ಲವೇ? ಇದನ್ನು ಎಲ್ಲರಿಗೂ ಹೇಳಬೇಕಾ? ಬೇಡ್ವಾ? ಎಂದು ಸಾಕಷ್ಟು ಬಾರಿ ಆಲೋಚಿಸಿದ್ದೇನೆ. ನನ್ನಂತೆ ಸಾಕಷ್ಟು ಮಹಿಳೆಯರು ಇದ್ದಾರೆ. ಮದುವೆ, ಮಕ್ಕಳು ಮಾಡಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಮಾತ್ರ ಭವಿಷ್ಯಕ್ಕಾಗಿ ಇದು ಬಹಳ ಮುಖ್ಯ ಎಂದು ಭಾವಿಸಿದೆ. ಈ ಬಗ್ಗೆ ನಾವು ದೊಡ್ಡದಾಗಿ ಮಾತನಾಡುತ್ತಿಲ್ಲ. ಆದರೆ ತಂತ್ರಜ್ಞಾನದ ಸಹಾಯದಿಂದ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ಡಿಗ್ಲ್ಯಾಮರ್ ಲುಕ್‌ನಲ್ಲಿ ನಟಿಸಲಿದ್ದಾರೆ ಅಮೃತಾ ಅಯ್ಯಂಗಾರ್

ತಾಯಿ ಆಗಬೇಕು ಎನ್ನುವುದು ನನ್ನ ಕನಸು. ಆದರೆ ಅದು ಕೆಲ ವರ್ಷಗಳು ತಡವಾಗಬಹುದು. ಆ ಕಾರಣಕ್ಕೆ ಅದನ್ನು ಬಿಡೋಕೆ ಸಾಧ್ಯವಿಲ್ಲ. ಅದಕ್ಕೆ ಈಗ ಎಗ್ ಫ್ರೀಜಿಂಗ್ ಮಾಡಿದ್ದೇನೆ. ಆಸ್ಪತ್ರೆ ಅಂದರೆ ಭಯಪಡುವ ನನ್ನಂತಹವರಿಗೆ ಇದು ನಿಜಕ್ಕೂ ಸವಾಲೇ ಸರಿ. ಯಾಕೆಂದರೆ ಇಂಜೆಕ್ಷನ್ ಕಾರಣಕ್ಕೆ ಆಸ್ಪತ್ರೆಗೆ ಹೋದ ಪ್ರತಿ ಬಾರಿ ನಾನು ತಲೆ ಸುತ್ತಿ ಬೀಳುತ್ತಿದ್ದೆ. ಆದರೆ ಎಗ್ ಫ್ರೀಜಿಂಗ್ (Egg Freezing) ಮಾಡುವುದು ಸರಿನಾ? ಎಂದು ಕೇಳಿದರೆ, ಖಂಡಿತಾ ಹೌದು ಎನ್ನುತ್ತೇನೆ ಎಂದು ಮಾತನಾಡುತ್ತೇನೆ.

 

View this post on Instagram

 

A post shared by MEHREEN ???????? (@mehreenpirzadaa)

ಈ ಜರ್ನಿಯಲ್ಲಿ ನನ್ನ ಬೆಂಬಲಿಸಿ ನಿಂತ ಡಾ.ರಿಮ್ಮಿ ಮತ್ತು ತಮ್ಮ ತಾಯಿಗೆ ಧನ್ಯವಾದಗಳು ಎಂದು ಮೆಹ್ರೀನ್ ಬರೆದುಕೊಂಡಿದ್ದಾರೆ. ಮಗುವಿನ ವಿಚಾರವಾಗಿ ನಟಿ ತೆಗೆದುಕೊಂಡ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌

ಅಂದಹಾಗೆ, ನಟ ಶಿವರಾಜ್‌ಕುಮಾರ್‌ ನಟನೆಯ ‘ನೀ ಸಿಗುವವರೆಗೂ’ ಸಿನಿಮಾದಲ್ಲಿ ಮೆಹ್ರೀನ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Share This Article