ಮೇ 2ರಂದು ಬರಲಿದೆ ಧನುಷ್‌, ರಶ್ಮಿಕಾ ನಟನೆಯ ‘ಕುಬೇರ’ ಚಿತ್ರದ ಟೀಸರ್

Public TV
1 Min Read

ಕಾಲಿವುಡ್ ನಟ ಧನುಷ್ (Dhanush), ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ (Kubera Film) ಸಿನಿಮಾದ ಟೀಸರ್ ಮೇ 2ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಚಿತ್ರದ ಮೊದಲ ತುಣುಕನ್ನು ರಿವೀಲ್ ಮಾಡುವ ಬಗ್ಗೆ ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

ಮೊದಲ ಬಾರಿಗೆ ಧನುಷ್ ಭಿಕ್ಷುಕನ ಪಾತ್ರದಲ್ಲಿ ನಟಿಸಿದ್ದಾರೆ. ಕೆಲದಿನಗಳ ಹಿಂದೆ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಈಗ ಕುಬೇರ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ. ಸಿನಿಮಾದಲ್ಲಿ ಧನುಷ್‌ ನಟನೆಯ ಝಲಕ್‌ ಅನ್ನು ನೋಡಬಹುದಾಗಿದೆ. ಇದನ್ನೂ ಓದಿ:ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ

ಧನುಷ್ ಮತ್ತು ರಶ್ಮಿಕಾ (Rashmika Mandanna) ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಲುಕ್ ಕೂಡ ಸಿಂಪಲ್ ಆಗಿದೆ. ತೆಲುಗಿನ ನಟ ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕುಬೇರ ಸಿನಿಮಾದ ಮೂಲಕ ಧನುಷ್‌, ರಶ್ಮಿಕಾ, ನಾಗಾರ್ಜುನ ಈ ಮೂರನ್ನು ಒಟ್ಟಿಗೆ ಫ್ಯಾನ್ಸ್ ಕಣ್ತುಂಬಿಕೊಳ್ಳಬಹುದಾಗಿದೆ.


ಮುಂಬೈನಲ್ಲಿ ‘ಕುಬೇರ’ (Kubera Film) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

Share This Article