ಭಾರತಕ್ಕೆ 600 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಪಾಕ್ ಬೋಟ್ ವಶಕ್ಕೆ

Public TV
1 Min Read

ನವದೆಹಲಿ: ಬರೋಬ್ಬರಿ 600 ಕೋಟಿ ರೂ. ಮೌಲ್ಯದ 86 ಕೆಜಿ ಮಾದಕ ದ್ರವ್ಯಗಳನ್ನು ಹೊಂದಿದ್ದ ಶಂಕಿತ ಪಾಕಿಸ್ತಾನಿ ಬೋಟ್‌ (Pakistani Boat), ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ಕೈಗೆ ಸಿಕ್ಕಿಬಿದ್ದಿದೆ.

ಗುಪ್ತಚರ ಮಾಹಿತಿಯ ಮೇರೆಗೆ, ಕೋಸ್ಟ್ ಗಾರ್ಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಾರ್ಯಾಚರಣೆ ನಡೆಸಿ, ಮಾದಕವಸ್ತು ಕಳ್ಳಸಾಗಣೆ ತಡೆಹಿಡಿದಿದೆ. ಇದನ್ನೂ ಓದಿ: ಆಪ್‌ ಮೈತ್ರಿಗೆ ವಿರೋಧ – ದೆಹಲಿಯ ಕಾಂಗ್ರೆಸ್‌ ಅಧ್ಯಕ್ಷ ರಾಜೀನಾಮೆ

ಡ್ರಗ್ಸ್ ಜೊತೆಗೆ ಪಾಕಿಸ್ತಾನಿ ಹಡಗಿನ 14 ಸಿಬ್ಬಂದಿಯನ್ನು ಸಹ ಬಂಧಿಸಲಾಗಿದೆ. ರಾತ್ರಿ ಸಮಯದಲ್ಲಿ, ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನದ ಬೋಟ್‌ನಿಂದ 14 ಸಿಬ್ಬಂದಿಯೊಂದಿಗೆ 600 ಕೋಟಿ ಮೌಲ್ಯದ ಸುಮಾರು 86 ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ವೇಳೆ ಹಡಗುಗಳು ಮತ್ತು ವಿಮಾನಗಳನ್ನು ನಿಯೋಜಿಸಲಾಗಿತ್ತು. ಕಾರ್ಯಾಚರಣೆಯ ಪ್ರಮುಖ ಹಡಗುಗಳಲ್ಲಿ ಒಂದಾದ ಕೋಸ್ಟ್‌ ಗಾರ್ಡ್‌ ಹಡಗು ರಾಜರತನ್‌ ಕೂಡ ಇತ್ತು. ಇದರಲ್ಲಿ ಎನ್‌ಸಿಬಿ ಮತ್ತು ಎಟಿಎಸ್‌ ಅಧಿಕಾರಿಗಳು ಇದ್ದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಮುಸ್ಲಿಮರ ಮತ ಬೇಕು, ಅಭ್ಯರ್ಥಿ ಬೇಡ – ಪ್ರಚಾರದಿಂದ ದೂರ ಸರಿದ ನಸೀಮ್‌ ಖಾನ್‌

ಶಂಕಿತ ಬೋಟ್‌ನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಮಾದಕವಸ್ತು ಇರುವುದು ದೃಢಪಟ್ಟಿದೆ. ವಶಪಡಿಸಿಕೊಂಡ ಪಾಕಿಸ್ತಾನಿ ಬೋಟನ್ನು ಅದರ ಸಿಬ್ಬಂದಿಯೊಂದಿಗೆ ಹೆಚ್ಚಿನ ತನಿಖೆಗಾಗಿ ಪೋರಬಂದರ್‌ಗೆ ತರಲಾಗುತ್ತಿದೆ.

Share This Article