ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಲಂಡನ್‌ನಿಂದ ಬಂದು ಯುವತಿ ಮತದಾನ

Public TV
1 Min Read

ಮಂಡ್ಯ: ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಲಂಡನ್‌ನಿಂದ ಬಂದು ಯುವತಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸೋನಿಕಾ ಲಂಡನ್‌ನಿಂದ ಬಂದು ಲೋಕಸಭಾ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಸೋನಿಕಾ ಲಂಡನ್‌ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 50.93% ವೋಟಿಂಗ್‌ – ಎಂದಿನಂತೆ ಬೆಂಗಳೂರಿನಲ್ಲಿ ಕಡಿಮೆ ಮತದಾನ

ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ನನ್ನ ಸಹೋದರ ಚುನಾವಣೆ ಬಗ್ಗೆ ತಿಳಿಸಿದರು. ಮತದಾನ ಮಾಡುವುದು ತುಂಬಾ ಮುಖ್ಯ ಎಂದು ನನಗೆ ಅರಿವು ಮೂಡಿಸಿದರು. ಹೀಗಾಗಿ ನಾನು ಲಂಡನ್‌ನಿಂದ ಬಂದು ವೋಟ್‌ ಹಾಕಿದ್ದೇನೆ ಎಂದು ತಿಳಿಸಿದರು.

ಎಲ್ಲರೂ ಬಂದು ತಪ್ಪದೇ ಮತದಾನ ಮಾಡಿ. ಇದು ತುಂಬಾ ಮುಖ್ಯ. ಅಭಿವೃದ್ಧಿಗಾಗಿ ಮತದಾನ ಮಾಡಿ. ರಾಜ್ಯದಲ್ಲಿ ಬರಗಾಲ ಕೂಡ ಇದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಒಳ್ಳೆಯ ವ್ಯಕ್ತಿಯ ಆಯ್ಕೆ ಮುಖ್ಯ. ಹೀಗಾಗಿ ಎಲ್ಲರೂ ಬಂದು ಮತ ಹಾಕಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹೃದಯಾಘಾತದಿಂದ ಮತದಾನ ಕೇಂದ್ರದ ಆವರಣದಲ್ಲೇ ಚಂಡೆ ವಾದಕ ನಿಧನ

Share This Article