ವೋಟ್‌ ಮಾಡಿದ ರಾಧಿಕಾ ಪಂಡಿತ್- ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

Public TV
1 Min Read

ಸ್ಯಾಂಡಲ್‌ವುಡ್ ಬ್ಯೂಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಪೋಷಕರ ಜೊತೆ ಬಂದು  ಮತದಾನ ಮಾಡಿದ್ದಾರೆ. ಸರದಿ ಸಾಲಿನಲ್ಲಿ ನಿಂತ ರಾಧಿಕಾ ಜೊತೆ ಸೆಲ್ಫಿ ಕ್ಲಿಕ್ಕಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ದೇಶಕ್ಕಾಗಿ ಮತ ಚಲಾವಣೆ ಮಾಡಬೇಕು: ಯಶ್‌ ಕರೆ

ಕುಟುಂಬದ ಜೊತೆ ಗಾಯತ್ರಿ ನಗರದ ಮತಗಟ್ಟೆಗೆ ಆಗಮಿಸಿ ರಾಧಿಕಾ ಪಂಡಿತ್ ವೋಟ್ (Vote) ಮಾಡಿದ್ದಾರೆ. ಈ ವೇಳೆ ನಟಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸೆಲೆಬ್ರಿಟಿಗಳು ಹೇಳ್ತಾರೆ ಅಂತ ವೋಟ್ ಮಾಡಬೇಡಿ. ಮತದಾನ ಮಾಡೋದು ನಮ್ಮೆಲ್ಲರ ಹಕ್ಕು ಎಂದಿದ್ದಾರೆ. ಎಲ್ಲರೂ ಬಂದು ಮತ ಚಲಾಯಿಸಿ ಇನ್ನೂ ಸಮಯ ಇದೆ ಬನ್ನಿ ಎಂದು ರಾಧಿಕಾ ಮಾತನಾಡಿದ್ದಾರೆ.

ನಾನೆಲ್ಲಿ ವೋಟ್ ಮಾಡ್ತೀನಿ ಅನ್ನೋದು ಮುಖ್ಯ ಅಲ್ಲ. ನಾವು ವೋಟ್ ಮಾಡ್ತಿವೋ ಇಲ್ವೋ ಎಂಬುದು ಮುಖ್ಯ ಎಂದು ನಟಿ ಮಾತನಾಡಿದ್ದಾರೆ. ಈ ಮೂಲಕ ಮತ ಚಲಾಯಿಸುವಂತೆ ಅಭಿಮಾನಿಗಳಿಗೆ ರಾಧಿಕಾ ಮನವಿ ಮಾಡಿದ್ದಾರೆ.

Share This Article