ವಿಜಯ್ ದೇವರಕೊಂಡ ಭೇಟಿ ಮಾಡಿದ ಪ್ರಶಾಂತ್ ನೀಲ್

Public TV
1 Min Read

ತೆಲುಗು ಚಿತ್ರೋದ್ಯಮದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಅದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ದಿಢೀರ್ ಅಂತ ವಿಜಯ್ ದೇವರಕೊಂಡ (Vijay Devarakonda) ಅವರನ್ನು ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ಭೇಟಿ  ಮಾಡಿದ್ದು, ವಿಜಯ್ ಅವರಿಗೆ ಏನಾದರೂ ಪ್ರಶಾಂತ್ ಸಿನಿಮಾ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಅಂದುಕೊಂಡಂತೆ ಆಗಿದ್ದರೆ ಸಲಾರ್ 2 ಸಿನಿಮಾ ಶುರುವಾಗಬೇಕಿತ್ತು. ಇದಾದ ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಪ್ರಶಾಂತ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಇವೆರಡೂ ಸಿನಿಮಾ ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದರಿಂದ ವಿಜಯ್ ಭೇಟಿ ಕುತೂಹಲ ಮೂಡಿಸಿದೆ.

 

ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾದಲ್ಲಿ ಹೊಸದೊಂದು ಪಾತ್ರವಿದ್ದ ಕಾರಣಕ್ಕೆ ವಿಜಯ್ ದೇವರಕೊಂಡ ಅವರನ್ನು ಪ್ರಶಾಂತ್ ಭೇಟಿಯಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾರೂ ಈ ಕುರಿತಂತೆ ಸ್ಪಷ್ಟನೆ ನೀಡಿಲ್ಲ.

Share This Article