ಹರ್ಷಿಕಾ ಹಲ್ಲೆ ಪ್ರಕರಣ- ಸಿಸಿಟಿವಿಯಲ್ಲಿ ಮೂವರು ಪತ್ತೆ

Public TV
1 Min Read

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ(Harshika Poonacha), ಭವನ್ (Actor Bhuvan) ಮೇಲಿನ ಹಲ್ಲೆ ನಡೆದಿತ್ತು. ಪ್ರಕರಣ ದಾಖಲಿಸಿದ ಬೆಂಗಳೂರಿನ ಪುಲಕೇಶಿನಗರದಲ್ಲಿ ಠಾಣೆಗೆ ಇಂದು ಹರ್ಷಿಕಾ ದಂಪತಿ ಆಗಮಿಸಿದ್ದು, ಹಲ್ಲೆ ಮಾಡಿದ ಮೂವರನ್ನು ಗುರುತಿಸಿದ್ದಾರೆ. ಸಿಸಿಟಿವಿಯಲ್ಲಿ ಮೂವರು ಕಿಡಿಗೇಡಿಗಳನ್ನು ಪತ್ತೆ ಮಾಡಿದ್ದಾರೆ.

harshika-poonacha-101391458
ಬೆಂಗಳೂರಿನ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್ ಬಳಿ ತಮಗಾದ ಕೆಟ್ಟ ಅನುಭವವನ್ನು ನಟಿ ಹರ್ಷಿಕಾ ಪೂಣಚ್ಚ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಪೊಲೀಸರು ಚುರುಕಿನಿಂದ ತನಿಖೆ ನಡೆಸಿದ್ದರು. ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಈ ಕುರಿತು ನಟ ಭುವನ್ ಹೇಳಿಕೆ ನೀಡಿದ್ದಾರೆ.

ದಾಖಲಿಸಿದ ದೂರಿಗೆ ಇಂದು (ಏ.23) ಸಹಿ ಹಾಕಲು ಬಂದಿರೋದಾಗಿ ಭುವನ್ ತಿಳಿಸಿದ್ದರು. ನಮ್ಮ ಮೇಲೆ ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿದ ಮೂವರನ್ನು ಗುರುತಿಸಿದ್ದೇವೆ. ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ ಕೆಲವು ವ್ಯಕ್ತಿಗಳನ್ನು ತೋರಿಸಿದ್ದಾರೆ. ಅವರಲ್ಲಿ ಅಂದು ನಮ್ಮ ಮೇಲೆ ಗಲಾಟೆ ಮಾಡಿದ ಮೂವರನ್ನು ಪತ್ತೆ ಮಾಡಿದ್ದೇವೆ ಎಂದು ಭುವನ್ ಮಾತನಾಡಿದ್ದಾರೆ.

ಪೊಲೀಸರು ಇಷ್ಟು ಬೇಗ ತನಿಖೆ ಮಾಡಿದ್ದರ ಬಗ್ಗೆ ತುಂಬಾ ಖುಷಿ ಇದೆ. ಇಷ್ಟು ವೇಗವಾಗಿ ತನಿಖೆ ಮಾಡುತ್ತಾರೆ ಎಂದು ಭಾವಿಸಿರಲಿಲ್ಲ. ನಮಗೆ ಆದ ರೀತಿ ಬೇರೆ ಯಾರಿಗೂ ಆಗಬಾರದು ಅನ್ನೋ ಉದ್ದೇಶಕ್ಕೆ ದೂರು ಕೊಟ್ಟಿದ್ದೇವೆ. ಈ ಕೇಸ್ ಎಲ್ಲರಿಗೂ ಮಾದರಿ ಆಗಬೇಕು. ಇನ್ಮುಂದೆ ಯಾರಿಗೂ ಈ ರೀತಿ ಆಗಬಾರದು ಎಂದು ಮಾತನಾಡಿದ್ದಾರೆ ಭುವನ್. ಪೊಲೀಸರು ಅದಷ್ಟು ಬೇಗ ಆರೋಪಿಗಳನ್ನು ಬಂಧಿಸೋದಾಗಿ ಭರವಸೆ ನೀಡಿದ್ದಾರೆ.

Share This Article