‘ಡ್ರಾಮಾ ಜೂನಿಯರ್ಸ್’ ಚಾಂಪಿಯನ್ ಆದ ರಿಷಿಕಾ ಕುಂದೇಶ್ವರ, ವಿಷ್ಣು

Public TV
1 Min Read

ಜೀ ಕನ್ನಡ ವಾಹಿನಿಯ ಅತ್ಯಂತ ಪ್ರತಿಷ‍್ಠಿತ ಕಾಮಿಡಿ ಶೋ  ಡ್ರಾಮಾ ಜೂನಿಯರ್‌ ಸೀಸನ್‌5  (Drama Junior) ತೆರೆ ಬಿದ್ದಿದೆ. ಈ ಸೀಸನ್ ನ ವಿನ್ನರ್ (Winner) ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ (Rishika Kundeswara) ಮತ್ತು ಕುಣಿಗಲ್ ನ ವಿಷ್ಣು  (Vishnu Kunigal) ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ.

ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ  ಫೈನಲ್‌ಗೆ ಲಗ್ಗೆ ಹಾಕಿದ್ದರು. ರಿಷಿಕಾ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.

ವಿಷ್ಣು ಕುಣಿಗಲ್  ಅವರು ವೆಂಕಟೇಶ್, ರಾಜೇಶ್ವರಿ ದಂಪತಿ ಪುತ್ರ. ರನ್ನರ್ ಅಪ್  ಮಹಾಲಕ್ಷ್ಮಿ, ಸೆಕೆಂಡ್ ರನ್ನರ್ ಅಪ್  ಇಂಚರ ಟ್ರೋಫಿ ಗೆದ್ದುಕೊಂಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ರಿಷಿಕಾ  ಅಲ್ಲಮಪ್ರಭು ನಾಟಕದಲ್ಲಿ ಭಕ್ತಿ ಭಾವನಾತ್ಮಕ ವಚನ  ಹೇಳುತ್ತಾ ಭಕ್ತಿಯ ಪರಾಕಾಷ್ಠೆ  ತೋರಿದ್ದರು.

 

ತೀರ್ಪುಗಾರರಾದ ರವಿಚಂದ್ರನ್‌, ಲಕ್ಷ್ಮೀ, ರಚಿತಾರಾಮ್ ,  ರಂಗ ಮೇಷ್ಟ್ರು ಅರುಣ್‌ ಸಾಗರ್‌, ರಾಜು ತಾಳಿಕೋಟೆ ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದರು. ವಿಷ್ಣು ಕುಣಿಗಲ್ ಕಾಮಿಡಿ ಸ್ಕಿಟ್ ಗಳಿಂದ ತೀರ್ಪುಗಾರರ ಮೆಚ್ಚುಗೆ ಜತೆಗೆ ಅಭಿಮಾನಿ ವರ್ಗ ಹೊಂದಿದ್ದರು.

Share This Article