Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

Public TV
1 Min Read

ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಇದೀಗ ಕಿಚ್ಚ ಸುದೀಪ್‌ರನ್ನು ಭೇಟಿಯಾಗಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಸುದೀಪ್ ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾ ಸೆಟ್‌ಗೆ ಕಾರ್ತಿಕ್ ಆಗಮಿಸಿದ್ದು, ಕಿಚ್ಚನ ಜೊತೆಯಿರುವ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.

ದೊಡ್ಮನೆ ಆಟ ಮುಗಿದ ಮೇಲೆ ಸುದೀಪ್‌ರನ್ನು ಕಾರ್ತಿಕ್ ಮಹೇಶ್ ಭೇಟಿಯಾಗಿರಲಿಲ್ಲ. ಬಹುದಿನಗಳ ನಂತರ ಚೆನ್ನೈ ಮಹಾಬಲಿಪುರಂನಲ್ಲಿ ಸುದೀಪ್‌ರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ‘ಮ್ಯಾಕ್ಸಿಮಮ್ ಲವ್’ ಎಂದು ಅಡಿಬರಹ ನೀಡಿ ಕಿಚ್ಚನ ಜೊತೆಗಿನ ಫೋಟೋ ಶೇರ್ ಮಾಡಿ ಕಾರ್ತಿಕ್ ಮಹೇಶ್ ಸಂಭ್ರಮಿಸಿದ್ದಾರೆ.

 

View this post on Instagram

 

A post shared by Karthik Mahesh (@karthi_mahesh)


ಕಣ್ಣಿಗೆ ಸ್ಟೈಲೀಶ್ ಸನ್‌ಗ್ಲಾಸ್ ತೊಟ್ಟು ಸುದೀಪ್ ಸಖತ್ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಲುಕ್ ಲೀಕ್ ಆಗದೇ ಇರುವ ಹಾಗೇ ಎಚ್ಚರ ಕೂಡ ವಹಿಸಿದ್ದಾರೆ. ಇದನ್ನೂ ಓದಿ:ಚುನಾವಣೆ ಪ್ರಚಾರ ವೇಳೆ ‘ಡೆವಿಲ್’ ಡೈಲಾಗ್ ಹೊಡೆದ ದರ್ಶನ್

‘ವಿಕ್ರಾಂತ್‌ರೋಣ’ ಚಿತ್ರದ ನಂತರ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

Share This Article