ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಮ್‌ ಯುವಕರಿಂದ ಹಲ್ಲೆ

Public TV
1 Min Read

ಮೈಸೂರು: ಮೋದಿ (PM Narendra Modi) ಪರ ಹಾಡು (Song) ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಲಕ್ಷ್ಮಿನಾರಾಯಣ್‌  ಹಲ್ಲೆಗೆ ಒಳಗಾದ ಯುವಕ. ಮೈಸೂರಿನ ಸರ್ಕಾರಿ ಅತಿಥಿ ಗೃಹದ (Mysuru Govt Guest House) ಬಳಿ ಯುವಕರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಲಕ್ಷ್ಮಿನಾರಾಯಣ್‌  ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಇದನ್ನೂ ಓದಿ: ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.. ಲವ್ ಜಿಹಾದ್ ನನಗೆ ಕಾಣುತ್ತಿಲ್ಲ: ಹುಬ್ಬಳ್ಳಿ ಕೊಲೆ ಬಗ್ಗೆ ಪರಮೇಶ್ವರ್ ಹೇಳಿಕೆ

 

ಲಕ್ಷ್ಮಿನಾರಾಯಣ್‌  ಹೇಳಿದ್ದೇನು?
ನಾನು ಕಳೆದ ವಾರ ಮೋದಿ ಕುರಿತಾಗಿ ಸಾಂಗ್‌ ಮಾಡಿದ್ದೆ. ನಾನು ಜನರ ಜೊತೆ ಈ ಸಾಗ್‌ ತೋರಿಸಿ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ. ಇದನ್ನೂ ಓದಿ: ಹುಬ್ಬಳ್ಳಿಯ ನೇಹಾ ಹತ್ಯೆಗೈದ ಫಯಾಜ್ ಕುಟುಂಬಸ್ಥರಿಗೆ ಪೊಲೀಸ್ ಭದ್ರತೆ

ನಾನು ಸರ್ಕಾರಿ ಗೆಸ್ಟ್‌ ಹೌಸ್‌ ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ಹುಡುಗ ಬಂದಿದ್ದ. ಆತನಿಗೆ ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದು ಹೇಳಿ ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋದ. ಈ ವೇಳೆ ಅವರು ಮೋದಿ ಬಗ್ಗೆ ಹಾಡು ಮಾಡ್ತೀಯಾ ಎಂದು ಪ್ರಶ್ನಿಸಿ ಪಾಕಿಸ್ತಾನದ ಪರ ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಒತ್ತಾಯ ಮಾಡಿದರು. ಅಷ್ಟೇ ಅಲ್ಲದೇ ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನನಗೆ ಅವರು ಮುಸ್ಲಿಮ್‌ ಹುಡುಗರು ಅಂತ ಗೊತ್ತಿರಲಿಲ್ಲ ಎಂದು ವಿಡಿಯೋದಲ್ಲಿ ರೋಹಿತ್‌ ಹೇಳಿದ್ದಾರೆ.

 

Share This Article