ಹುಬ್ಬಳ್ಳಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯ ಹತ್ಯೆ – ಯುವಕ ಅರೆಸ್ಟ್‌

By
1 Min Read

ಹುಬ್ಬಳ್ಳಿ: ಯುವಕನೊಬ್ಬ ವಿದ್ಯಾರ್ಥಿನಿಯನ್ನು ಬಿವಿಬಿ ಕಾಲೇಜ್ (BVB College) ಕ್ಯಾಂಪಸ್‌ನಲ್ಲೇ ಕೊಲೆ (Murder) ಮಾಡಿದ್ದಾನೆ.

ಪಾಲಿಕೆಯ ಕಾಂಗ್ರೆಸ್‌ ಸದಸ್ಯ (Congress Corporator) ನಿರಂಜನ ಹಿರೇಮಠ ಅವರ ಪುತ್ರಿ ನೇಹಾ (Neha) ಕೊಲೆಯಾದ ವಿದ್ಯಾರ್ಥಿನಿ. ಅದೇ ಕಾಲೇಜಿನ ವಿದ್ಯಾರ್ಥಿ  ಫಯಾಜ್‌ (23)  9 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಪ್ರಥಮ ವರ್ಷದ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ನೇಹಾಗೆ(23) ಕ್ಯಾಂಪಸ್‌ನಲ್ಲೇ 9 ಬಾರಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇಹಾಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್‌ ವೈರಲ್‌

 

ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫಯಾಜ್‌ ಕೆಲ ದಿನಗಳಿಂದ ನೇಹಾ ಬೆನ್ನು ಬಿದ್ದಿದ್ದ. ಆದರೆ ನೇಹಾ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ

ಕೊಲೆ ಮಾಡಿ ಪರಾರಿಯಾಗುತ್ತಿದ್ದಾಗ ಫಯಾಜ್‌ನನ್ನು ಅಲ್ಲಿದ್ದ ವ್ಯಕ್ತಿಗಳು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಈಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿಯಾಗಿದ್ದು ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಕಳೆದ ಆರು ತಿಂಗಳಿಂದ ಫೇಲ್ ಆಗಿ ಫಯಾಜ್ ಕಾಲೇಜ್ ಬಿಟ್ಟಿದ್ದ . ಇಂದು ನೇಹಾಳನ್ನು ಕೊಲೆ ಮಾಡಲೆಂದೇ ಫಯಾಜ್ ಕಾಲೇಜಿಗೆ ಬಂದಿದ್ದ.

 

Share This Article