UPSC ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ್‌ಗೆ ಮೊದಲ ರ‍್ಯಾಂಕ್‌

Public TV
1 Min Read

ನವದೆಹಲಿ: ನಾಗರಿಕ ಸೇವಾ ಪರೀಕ್ಷೆ (UPSC)-2023 ರ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಐಎಎಸ್‌ ವಿಭಾಗದಲ್ಲಿ ಆದಿತ್ಯ ಶ್ರೀವಾಸ್ತವ್‌ ದೇಶಕ್ಕೆ ಮೊದಲ 1 ಸ್ಥಾನ ಪಡೆದುಕೊಂಡಿದ್ದಾರೆ.

ಐಎಎಸ್ 180, ಐಎಫ್‌ಎಸ್ 37, ಐಪಿಎಸ್ ವಿಭಾಗದಲ್ಲಿ 200 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರೂಪ್ ಎ 613, ಗ್ರೂಪ್ ಬಿ 113 ಮಂದಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಸೀಮಾ ಹೈದರ್‌ಗೆ ಕಾನೂನು ಸಂಕಷ್ಟ; ನೋಯ್ಡಾ ಕೋರ್ಟ್‌ನಿಂದ ಸಮನ್ಸ್‌ ಜಾರಿ

ಈ ವರ್ಷ ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನ ಪಡೆದರೆ, ಅನಿಮೇಶ್ ಪ್ರಧಾನ್ ದ್ವಿತೀಯ, ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಫಲಿತಾಂಶಕ್ಕೆ  official website ಗೆ ಭೇಟಿ ನೀಡಬಹುದು.

Share This Article