2ನೇ ಮದುವೆಯಾದ ‘ಇಂಡಿಯನ್ 2’ ಚಿತ್ರ ನಿರ್ದೇಶಕನ ಪುತ್ರಿ

Public TV
1 Min Read

ಗೇಮ್ ಚೇಂಜರ್, ಇಂಡಿಯನ್ 2 (Indian 2) ಸಿನಿಮಾಗಳ ಎಸ್. ಶಂಕರ್ ಅವರ ಪುತ್ರಿ ಐಶ್ವರ್ಯಾ (Aishwarya Shankar) ಮದುವೆಯು ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ಟಾರ್ ನಿರ್ದೇಶಕನ ಪುತ್ರಿಯ ಮದುವೆಗೆ ನಯನತಾರಾ ದಂಪತಿ, ರಜನಿಕಾಂತ್, ಸೂರ್ಯ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

ಎಸ್. ಶಂಕರ್ (S Shankar) ಮಗಳು ಐಶ್ವರ್ಯಾ ಇದೀಗ ಸಹಯಕ ನಿರ್ದೇಶಕ ತರುಣ್ ಕಾರ್ತಿಕೇಯನ್ ಜೊತೆ ಜರುಗಿದೆ. ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸಹಾಯಕ ನಿರ್ದೇಶಕನ ಜೊತೆ ಐಶ್ವರ್ಯ ಮದುವೆ ಇಂದು (ಏ.15) ಗ್ರ್ಯಾಂಡ್‌ಯಾಗಿ ನಡೆದಿದೆ. ಇದನ್ನೂ ಓದಿ:‘ಕಂಗುವ’ ಸಿನಿಮಾದಲ್ಲಿ ಸೂರ್ಯ ಡಬಲ್ ರೋಲ್

ಈ ಸಮಾರಂಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ, ನಟ ಚಿಯಾನ್ ವಿಕ್ರಮ್, ಮಣಿರತ್ನಂ, ಸುಹಾಸಿನಿ, ನಯನತಾರಾ, ತಲೈವ, ಕಮಲ್ ಹಾಸನ್ ಸೇರಿದಂತೆ ಸ್ಟಾರ್ ಕಲಾವಿದರ ದಂಡೇ ಶಂಕರ್ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಡೈರೆಕ್ಟರ್ ಶಂಕರ್ ಮಗಳು ಐಶ್ವರ್ಯಾ ಅವರು 2022ರಲ್ಲಿ ಕ್ರಿಕೆಟರ್ ರೋಹಿತ್ ದಾಮೋದರನ್ ಜೊತೆ ಮದುವೆಯಾಗಿತ್ತು. ಕೆಲ ಮನಸ್ತಾಪಗಳಿಂದ ಬೇಗನೇ ಈ ಮದುವೆ ಮುರಿದು ಬಿದ್ದಿತ್ತು. ಇಬ್ಬರ ಸಮ್ಮತಿಯ ಮೇರೆಗೆ ಡಿವೋರ್ಸ್ ಪಡೆದರು.

ಇದೀಗ ತರುಣ್ ಜೊತೆ 2ನೇ ಮದುವೆಯಾಗಿ ಐಶ್ವರ್ಯಾ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಿರ್ದೇಶಕನ ಪುತ್ರಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

Share This Article