ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್

Public TV
1 Min Read

ಚಿಕ್ಕಬಳ್ಳಾಪುರ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ದಲಿತರ ನಿವಾಸಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ (Sudhakar) ಭಾನುವಾರ ಭೇಟಿ ನೀಡಿ ಉಪಹಾರ ಸೇವನೆ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು ಗೂಳೂರು ಗ್ರಾಮದ ಪೆದ್ದವೆಂಕಟರಾಯಪ್ಪ ಹಾಗೂ ಲಕ್ಷ್ಮೀದೇವಮ್ಮ ದಂಪತಿ ಮನೆಗೆ ಭೇಟಿ ನೀಡಿದರು. ಈ ವೇಳೆ ಸುಧಾಕರ್‌ಗೆ ಆರತಿ ಬೆಳಗಿ, ಹೂವಿನ ಹಾರ ಹಾಕಿ ಮನೆ ಮಾಲೀಕ ಪೆದ್ದವೆಂಕಟರಾಯಪ್ಪ, ಲಕ್ಷ್ಮೀದೇವಮ್ಮ ದಂಪತಿ ಸ್ವಾಗತಿಸಿದರು. ಇದನ್ನೂ ಓದಿ: 3 ಕೋಟಿ ಬಡವರಿಗೆ ಮನೆ, ದೇಶದ 4 ದಿಕ್ಕುಗಳಿಗೂ ಬುಲೆಟ್‌ ಟ್ರೈನ್‌: ಮೋದಿ ಗ್ಯಾರಂಟಿ

ನಂತರ ಮಾತನಾಡಿದ ಸುಧಾಕರ್, ಇಂದು ಅಂಬೇಡ್ಕರ್ ಜಯಂತಿ. ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದರು ನನಗೆ ಆದರ್ಶ. ಸಮಾನತೆಯ ಸಂದೇಶ ಸಾರಿದ ಅಂಬೇಡ್ಕರ್ ಅವರ ಜಯಂತಿಯಂದು ದಲಿತರ ಮನೆಗೆ ಭೇಟಿ ನೀಡಿ ಉಪಾಹಾರ ಸೇವನೆ ಮಾಡುವ ಮೂಲಕ ಅವರ ಕಷ್ಟ-ಸುಖ ಆಲಿಸುವ ಕಾಯಕ ಮಾಡಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್‌ನವರು ದಲಿತರನ್ನ ವೋಟ್ ಬ್ಯಾಂಕ್ ಆಗಿ ಕಾಣುತ್ತಾರೆಯೇ ಹೊರತು ಅವರ ಶ್ರೇಯಸ್ಸಿಗೆ ಯಾವುದೇ ಯೋಜನೆಗಳನ್ನ ರೂಪಿಸಿಲ್ಲ. ಬಿಜೆಪಿ ಅಂಬೇಡ್ಕರ್ ಅವರ ಸಮಾನತೆಯ ಸಂದೇಶ ಸಾರುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿ‌ ಪ್ರಣಾಳಿಕೆ ಬಿಡುಗಡೆ ದಿನವೇ ತಮ್ಮ ಪ್ರಣಾಳಿಕೆ ಘೋಷಿಸಿದ ಈಶ್ವರಪ್ಪ

Share This Article