23ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅಂತ ಬೇಸರವಿದೆ: ಸೋನು ಶ್ರೀನಿವಾಸ್ ಗೌಡ

Public TV
1 Min Read

ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಕಾನೂನು ಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಏ.6ರಂದು ಸೋನು ಜೈಲಿನಿಂದ (Jail) ರಿಲೀಸ್ ಆಗಿದ್ದಾರೆ. ಜೈಲಿನಿಂದ ಹೊರಬಂದ್ಮೇಲೆ ಸೋನು ಸಖತ್ ಸೈಲೆಂಟ್ ಆಗಿದ್ದರು.

ಪರಪ್ಪನ ಅಗ್ರಹಾರದಿಂದ ರಿಲೀಸ್ ಆದ್ಮೇಲೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದರು. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿರಲಿಲ್ಲ. ಆದರೆ ಈ ಪ್ರಕರಣ ಇನ್ನೂ ನಡೆಯುತ್ತಿದೆ. ಜಾಮೀನಿನ ಮೇಲೆ ಸೋನು ಹೊರಬಂದಿದ್ದಾರೆ.

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಮೊದಲ ಪ್ರತಿಕ್ರಿಯೆ ಮುಂದಿನ ನಡೆ ಏನು ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಈಗ ಸಿಕ್ಕಾಪಟ್ಟೆ ಸೈಲೆಂಟ್‌ ಆಗಿದ್ದರು. ತಮ್ಮ ಮನೆಯಲ್ಲಿ ಸೋನು ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಆಗಿರುವ ವಿವಾದದಿಂದ ಸೋನು ಮೌನಕ್ಕೆ ಶರಣಾಗಿದ್ದರು. ಈಗ ವಿಡಿಯೋವೊಂದನ್ನು ಮಾಡಿ ಜೈಲು ಎಕ್ಸಪಿರಿಯನ್ಸ್ ಹೇಳಿಕೊಂಡಿದ್ದಾರೆ.

ಕೇಸ್ ಬಗ್ಗೆ ಏನೂ ಮಾತನಾಡಬಾರದು ಎನ್ನುವ ಲಾಯರ್ ಮಾತನ್ನು ಪಾಲಿಸಿರುವ ಅವರು, ಜೈಲು ಅನುಭವವನ್ನು ತೆರೆದಿಟ್ಟಿದ್ದಾರೆ. ನಾಲ್ಕು ಗೋಡೆ ಮಧ್ಯ ಬದುಕೋದು ತುಂಬಾ ಕಷ್ಟ ಅನಿಸಿತು ಎಂದಿದ್ದಾರೆ. ಜೈಲಿನಲ್ಲಿ ತುಂಬಾ ಸೊಳ್ಳೆಗಳು ಇದ್ದವು. ನನಗೆ ಮಲಗೋಕೆ ಕಷ್ಟ ಆಗುತ್ತಿತ್ತು ಅಂತಾನೂ ಹೇಳಿಕೊಂಡಿದ್ದಾರೆ.

 

23ನೇ ವಯಸ್ಸಿಗೆ ಜೈಲು ನೋಡಿ ಬಂದಿದ್ದು ಅವರಿಗೆ ಆಘಾತ ತರಿಸಿದೆ. ನಾನು ಯಾವತ್ತೂ ಇಂಥದ್ದೊಂದು ಸನ್ನಿವೇಶ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕೇಸ್ ಬಗ್ಗೆ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ. ಯಾವ ವಿಷಯವನ್ನೂ ಮುಚ್ಚಿಡಲ್ಲ ಎಂದು ಪ್ರಾಮೀಸ್ ಮಾಡಿದ್ದಾರೆ. ಕಷ್ಟದ ದಿನಗಳಲ್ಲಿ ಸಾಥ್ ಕೊಟ್ಟವರನ್ನು ನೆನಪಿಸಿಕೊಂಡಿದ್ದಾರೆ ಸೋನು.

Share This Article