ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ – ವ್ಯಕ್ತಿ, ಆತನ ಇಬ್ಬರು ಸಹೋದರಿಯರು ದುರ್ಮರಣ

Public TV
1 Min Read

ನವದೆಹಲಿ: ದೆಹಲಿಯ ನೆರೆಯ ಗ್ರೇಟರ್ ನೋಯ್ಡಾದಲ್ಲಿ ವೇಗವಾಗಿ ಬಂದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಬೈಕ್‌ನಲ್ಲಿದ್ದ ಮತ್ತೊಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಗ್ರೇಟರ್ ನೋಯ್ಡಾದ ಕ್ರಾಸಿಂಗ್ ಪ್ಯಾರಿ ಚೌಕ್ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಸುರೇಂದ್ರ ಎಂಬಾತ ತನ್ನ ಸಹೋದರಿಯರೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದಾಗ ಅಪಘಾತವಾಗಿದೆ. ಸುರೇಂದ್ರ ಸಹೋದರಿಯರಾದ ಶೈಲಿ ಮತ್ತು ಅಂಶು ಕೂಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ಕಾರು-ಲಾರಿ ಭೀಕರ ಅಪಘಾತ; ಸ್ಥಳದಲ್ಲೇ ನಾಲ್ವರು ಸಾವು

ವೇಗವಾಗಿ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ವ್ಯಕ್ತಿ ಮತ್ತು ಆತನ ಸಹೋದರಿಯರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುರೇಂದ್ರ ತನ್ನ ಸಹೋದರಿಯರೊಂದಿಗೆ ನೋಯ್ಡಾದ ಕುಲೇಸರ ಎಂಬ ತಮ್ಮ ನಿವಾಸಕ್ಕೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಗಾಯಾಳುಗಳ ಮೇಲೆ ಹರಿದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೈಕ್‌ಗೆ ಡಿಕ್ಕಿ ಹೊಡೆದ ವಾಹನವನ್ನು ಪೊಲೀಸರು ಇನ್ನೂ ಗುರುತಿಸಿಲ್ಲ. ವಾಹನವನ್ನು ಪತ್ತೆಹಚ್ಚಲು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

Share This Article