ದಕ್ಷಿಣ ಕೊರಿಯಾದ ಸಿಂಗರ್ ಪಾರ್ಕ್ ಬೋ ರಾಮ್ ಅನುಮಾನಾಸ್ಪದ ಸಾವು

Public TV
1 Min Read

ಕ್ಷಿಣ ಕೊರಿಯಾದ ಗಾಯಕಿ (Singer) ಪಾರ್ಕ್ ಬೋ ರಾಮ್ (Park Bo Ram) ತಮ್ಮ 30ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಏ.11ರಂದು ಗಾಯಕಿ ನಿಧನರಾಗಿದ್ದಾರೆ. ಏಜೆನ್ಸಿ ಕ್ಸಾನಾಡು ಎಂಟರ್‌ಟೈನ್‌ಮೆಂಟ್ ಕಡೆಯಿಂದ ಗಾಯಕಿಯ ಸಾವಿನ ಕುರಿತು ಅಧಿಕೃತ ಮಾಹಿತಿ ಸಿಕ್ಕಿದೆ.

ಅವರ ಹಠಾತ್ ನಿಧನದ ಬಗ್ಗೆ ಅವರ ಕುಟುಂಬದಕ್ಕೆ ಮತ್ತು ಆಪ್ತರಿಗೆ ಶಾಕ್ ಕೊಟ್ಟಿದೆ. ಗಾಯಕಿಯ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರು ಈ ಬಗ್ಗೆ ವಿಚಾರಣೆ ಕೈಗೊಂಡಿದ್ದಾರೆ.‌ ಇದನ್ನೂ ಓದಿ:ಚುನಾವಣಾ ಪ್ರಚಾರದಲ್ಲಿದ್ದ ಖಳನಟ ಅರುಳ್ ಮಣಿ ಹೃದಯಾಘಾತದಿಂದ ನಿಧನ

ಅಂದಹಾಗೆ, ಈ ವರ್ಷದ ಕೊನೆಯಲ್ಲಿ 2 ಹಾಡುಗಳನ್ನು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡುವ ಬಗ್ಗೆ ಪಾರ್ಕ್ ಬೋ ರಾಮ್ ಪ್ಲ್ಯಾನ್ ಮಾಡಿದ್ದರು. ಗಾಯಕಿ ತಮ್ಮ 17ನೇ ವಯಸ್ಸಿಗೆ ಸೂಪರ್ ಸ್ಟಾರ್ ಕೆ2 ಎಂಬ ಗಾಯನ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದರು.

Share This Article