Special- ‘ಕಾಂತಾರ’ ಪ್ರೀಕ್ವೆಲ್ ಶೂಟಿಂಗ್ ದಿನವೇ ‘ಟಾಕ್ಸಿಕ್’ ಶೂಟಿಂಗ್ ಶುರು

Public TV
1 Min Read

ನ್ನಡದ ಎರಡು ಭಾರೀ ಬಜೆಟ್ ಸಿನಿಮಾಗಳು ಒಂದೇ ದಿನ ಶೂಟಿಂಗ್ ಆರಂಭಿಸುತ್ತಿವೆ. ಯಶ್ (Yash) ನಟನೆಯ ಟಾಕ್ಸಿಕ್ (Toxic) ಮತ್ತು ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡುತ್ತಿರುವ ಕಾಂತಾರ (Kantara)  ಪ್ರೀಕ್ವೆಲ್ ಚಿತ್ರಗಳು ಏಪ್ರಿಲ್ 15ರಿಂದ ಚಿತ್ರೀಕರಣ ಆರಂಭಿಸುತ್ತಿವೆ. ಕಾಂತಾರ ಚಿತ್ರೀಕರಣ ಕುಂದಾಪುರದಿಂದ ಶುರುವಾದರೆ, ಟಾಕ್ಸಿಕ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆ.

ಕುಂದಾಪುರದಲ್ಲಿ ಕಾಂತಾರ ಚಿತ್ರಕ್ಕಾಗಿ ಬೃಹತ್ ಸೆಟ್ ಹಾಕಲಾಗಿದ್ದು, ಅಲ್ಲಿಯೇ ಬಹುತೇಕ ಒಳಾಂಗದ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ನಂತರ ಕಾಡು, ಮೇಡುಗಳಲ್ಲಿ ಶೆಟ್ಟರ ಕ್ಯಾಮೆರಾ ಹಿಡಿದು ಹೊರಡಲಿದ್ಧಾರೆ. ಈ ಹಿಂದೆಯೇ ಚಿತ್ರೀಕರಣ ಶುರುವಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಏಪ್ರಿಲ್ 15ರಿಂದ ಪ್ರಾರಂಭವಾಗುತ್ತಿದೆ.

ಇತ್ತ ಟಾಕ್ಸಿಕ್ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಎಚ್.ಎಂ.ಟಿ ಫ್ಯಾಕ್ಟರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಯಶ್. ಈ ಆವರಣದಲ್ಲೇ ಬೃಹತ್ ಸೆಟ್ ಹಾಕಲಾಗಿದೆ. ಒಳಾಂಗಣದ ಬಹುತೇಕ ಚಿತ್ರೀಕರಣ ಇದೇ ಸೆಟ್ ನಲ್ಲೇ ನಡೆಯಲಿದೆ. ನಂತರ ಮುಂಬೈಗೆ ಚಿತ್ರೀಕರಣ ತಂಡ ಶಿಫ್ಟ್ ಆಗಲಿದೆ ಎನ್ನುವ ಮಾಹಿತಿ ಇದೆ.

ಕಾಂತಾರ ಪ್ರೀಕ್ವೆಲ್ ಒಟ್ಟು ಬಜೆಟ್ 60 ಕೋಟಿ ಎಂದು ಹೇಳಲಾಗುತ್ತಿದೆ. ಈ ಹಿಂದಿನ ಕಾಂತಾರ ಚಿತ್ರಕ್ಕೆ ರಿಷಬ್ ಖರ್ಚು ಮಾಡಿದ್ದು ಕೇವಲ 18 ಕೋಟಿ ರೂಪಾಯಿ. ಈಗ ಅದು 60 ಕೋಟಿ ರೂಪಾಯಿಗೆ ಹಿಗ್ಗಿದೆ. ಕಾರಣ ಸ್ಕ್ರಿಪ್ಟ್ ಆ ರೀತಿಯಲ್ಲೇ ರೆಡಿ ಆಗಿದೆ. ಮತ್ತು ದೊಡ್ಡ ಮಟ್ಟದಲ್ಲಿ ಮೇಕಿಂಗ್ ಮಾಡಲಾಗುತ್ತಿದೆ.

ಗಾಂಧಿನಗರದಲ್ಲಿ ಹರಿದಾಡುತ್ತಿರುವ ತಾಜಾ ಸುದ್ದಿಯ ಪ್ರಕಾರ ಟಾಕ್ಸಿಕ್ ಬಜೆಟ್ 150 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ, ಈವರೆಗೂ ಬಜೆಟ್ ಕುರಿತಾಗಿ ಚಿತ್ರತಂಡವಾಗಲಿ ಅಥವಾ ನಿರ್ಮಾಪಕರಾಗಲಿ ಅಧಿಕೃತವಾಗಿ ಹೇಳಿಲ್ಲ. ಯಶ್ ಸಿನಿಮಾ ಬಜೆಟ್ ನೂರು ಕೋಟಿ ಇರಲೇಬೇಕು ಎಂದು ವಿಶ್ಲೇಷಿಸಲಾಗುತ್ತಿದೆ.

Share This Article