ಸಲ್ಮಾನ್ ಚಿತ್ರಕ್ಕೆ ‘ಸಿಖಂದರ್’ ಟೈಟಲ್: ದಕ್ಷಿಣದ ಸ್ಟಾರ್ ನಿರ್ದೇಶಕನ ಸಿನಿಮಾವಿದು

Public TV
1 Min Read

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಚಿತ್ರರಂಗದಲ್ಲಿ ಲಕ್ ಕೈಕೊಟ್ಟಿದೆ. ಯಾವುದೇ ರೀತಿಯ ಸಿನಿಮಾ ಮಾಡಿದ್ರೂ ಸಲ್ಮಾನ್‌ಗೆ ಸಕ್ಸಸ್ ರುಚಿ ಸಿಗುತ್ತಿಲ್ಲ. ಸತತ ಸಿನಿಮಾ ಸೋಲಿನ ಬೆನ್ನಲ್ಲೇ ತಮಿಳಿನ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲು ಹೊರಟಿರುವ ವಿಚಾರ ಗೊತ್ತೇ ಇದೆ. ಆ ಚಿತ್ರಕ್ಕೆ ಇಂದು ಟೈಟಲ್ ಫಿಕ್ಸ್ ಆಗಿದೆ.

ಇದೀಗ ಚಿತ್ರರಂಗದಲ್ಲಿ ಹಿಂದಿ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಭಾರೀ ಸದ್ದು ಮಾಡುತ್ತಿವೆ. ಅದಕ್ಕಾಗಿ ಹೊಸ ಪ್ರಯೋಗ ಮಾಡೋದಕ್ಕೆ ಸಲ್ಮಾನ್ ಸಜ್ಜಾಗಿದ್ದಾರೆ. ಕಾಲಿವುಡ್ ಸ್ಟಾರ್ ಡೈರೆಕ್ಟರ್ ಎಆರ್ ಮುರುಗದಾಸ್ ಜೊತೆ ಸಿನಿಮಾ ಮಾಡಲು ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ಸಿಖಂದರ್ (Sikhander) ಎಂದು ಇಂದು ನಾಮಕರಣ ಮಾಡಲಾಗಿದೆ.

ಈ ಹಿಂದೆ ತಮ್ಮ ಹೊಸ ಸಿನಿಮಾ ಬಗ್ಗೆ ಸಲ್ಮಾನ್ ಖಾನ್  ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಈ ಪ್ರತಿಭಾವಂತ ತಂಡವನ್ನು ಸೇರಿಕೊಳ್ಳುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ. ಎಆರ್ ಮುರುಗದಾಸ್ (Murugadoss) ಮತ್ತು ನನ್ನ ಗೆಳೆಯ ಸಾಜಿದ್ ನಾಡಿಯಾವಾಲ (Sajid Nadiadwala) ಜೊತೆಗೆ ಸಿನಿಮಾ ಮಾಡುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ. ಈ ಸಿನಿಮಾ ಬಹಳ ವಿಶೇಷವಾಗಿರಲಿದೆ. ಈ ಸಿನಿಮಾಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಮತ್ತು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದೇನೆ. 2025ರ ಈದ್ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದರು.

 

ಈ ಸಿನಿಮಾ ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದ್ದು, ಸಿನಿಮಾದ ಶೂಟಿಂಗ್ ಪೋರ್ಚುಗಲ್ ಮತ್ತು ಕೆಲವು ಯೂರೋಪ್ ದೇಶಗಳಲ್ಲಿ ನಡೆಯಲಿದೆ. ಸುಮಾರು 400 ಕೋಟಿ ಬಜೆಟ್‌ನಲ್ಲಿ ಮೂಡಿ ಬರಲಿದೆ. ಸಿನಿಮಾದಲ್ಲಿ ಬೇರೆ ಭಾಷೆಗಳ ಕೆಲವು ಸ್ಟಾರ್ ನಟರು ಸಹ ನಟಿಸಲಿದ್ದಾರೆ. ಈ ಸಿನಿಮಾ ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಸಲ್ಮಾನ್‌ ಈ ತಂತ್ರ ಕೈಹಿಡಿಯುತ್ತಾ? ಕಾದುನೋಡಬೇಕಿದೆ.

Share This Article