ಹೆಣ್ಣು ಮಗುವನ್ನು ಬರಮಾಡಿಕೊಂಡ ‘ಸತ್ಯ’ ಸೀರಿಯಲ್ ಹೀರೋ

Public TV
1 Min Read

ಕಿರುತೆರೆಯ ಜನಪ್ರಿಯ ‘ಸತ್ಯ’ ಸೀರಿಯಲ್ ಹೀರೋ ಸಾಗರ್ ಬಿಳಿಗೌಡ (Sagar Biligowda) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಾಗರ್ ಪತ್ನಿ ಸಿರಿ ರಾಜು (Siri Raju) ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಮಹಾಲಕ್ಷ್ಮಿ ಆಗಮನದ ಕುರಿತು ನಟ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

 

View this post on Instagram

 

A post shared by C R Siri (@siri_rajuu_)


ಹೆಣ್ಣು ಮಗುವಿಗೆ ತಂದೆಯಾಗಿರುವ ಸಂಭ್ರಮದಲ್ಲಿ ನಟ ಸಾಗರ್ ಬಿಳಿ ಗೌಡ. ಸ್ಪೆಷಲ್ ವಿಡಿಯೋ ಮಾಡಿ ನಟಿ ಸಿರಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಮಾಯಕ ಗಂಡನಿಗೆ ಯಾಕೆ ಮೋಸ ಮಾಡಿದ್ರಿ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

ಕಳೆದ ವರ್ಷ ಜನವರಿ 26ರಂದು ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಸಾಗರ್ ಮತ್ತು ಸಿರಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಗೆ ಸೀರಿಯಲ್‌ ನಟ-ನಟಿಯರು ಆಗಮಿಸಿ ಶುಭಕೋರಿದ್ದರು.

Share This Article