ಅಮಾಯಕ ಗಂಡನಿಗೆ ಯಾಕೆ ಮೋಸ ಮಾಡಿದ್ರಿ ಎಂದವನಿಗೆ ತಕ್ಕ ಉತ್ತರ ಕೊಟ್ಟ ಸಮಂತಾ

Public TV
1 Min Read

ಟಾಲಿವುಡ್ (Tollywood) ನಟಿ ಸಮಂತಾ (Samantha) ಇದೀಗ ಗಟ್ಟಿಗಿತ್ತಿಯಾಗಿ ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಸಿನಿಮಾ ಮಾತ್ರವಲ್ಲ, ವೈಯಕ್ತಿಕ ವಿಚಾರವಾಗಿ ಸಮಂತಾ ಬೋಲ್ಡ್ ಡಿಸಿಷನ್ ತೆಗೆದುಕೊಂಡು ಮುನ್ನುಡೆಯುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ವಿಚಾರದಲ್ಲಿ ಕೆಣಕಿದವನಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

ಆರೋಗ್ಯದ ವಿಚಾರವಾಗಿ ದೈನಂದಿನ ಬದುಕಿನ ಬಗ್ಗೆ ಕೆಲವು ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಅದರ ಕಾಮೆಂಟ್ ಬ್ಯಾಕ್ಸ್‌ನಲ್ಲಿ ನಿಮ್ಮ ಅಮಾಯಕ ಪತಿಗೆ (Nagachaitanya) ಯಾಕೆ ಮೋಸ ಮಾಡಿದ್ರಿ ಎಂದು ಸಮಂತಾಗೆ ನೆಟ್ಟಿಗನೊಬ್ಬ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

‘ಕ್ಷಮಿಸಿ’ ಇಂತಹ ವಿಚಾರಗಳು ನಿಮಗೆ ಬೇಕಾಗಿಲ್ಲ. ಹೇಳಿದರೆ ನಿಮಗೆ ಅರ್ಥವಾಗದೇ ಇರಬಹುದು. ವಿಶ್ ಯೂ ವೆಲ್ ಎಂದು ಸಮಂತಾ ರಿಪ್ಲೈ ನೀಡಿದ್ದಾರೆ. ಬಳಿಕ ಸ್ಯಾಮ್‌ಗೆ ಬೆಂಬಲಿಸಿ ಫ್ಯಾನ್ಸ್, ಇಂತಹ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ನೆಟ್ಟಿಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಂದಹಾಗೆ, ಸಮಂತಾ ಬಾಲಿವುಡ್ ಸಿನಿಮಾ ಜೊತೆ ಅಲ್ಲು ಅರ್ಜುನ್ ಜೊತೆ ಹೊಸ ಸಿನಿಮಾ, ವಿಜಯ್ ದಳಪತಿ ಜೊತೆ ಹೊಸ ಸಿನಿಮಾವನ್ನು ಮಾಡಲು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.

Share This Article