ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್

Public TV
1 Min Read

ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಹುಟ್ಟು ಹಬ್ಬ ನಿನ್ನೆ ರಾತ್ರಿ ಅದ್ಧೂರಿಯಾಗಿ ಜಾಮ್ ನಗರದಲ್ಲಿ ನಡೆದಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಹುಟ್ಟು ಹಬ್ಬಕ್ಕೆ  (Birthday) ಸಾಕ್ಷಿಯಾಗಿದ್ದರು. ಅದರಲ್ಲೂ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ.

ಜಾಮ್ ನಗರದಲ್ಲಿ ಅನಂತ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಪಾಲ್ಗೊಂಡಿದ್ದಾರೆ.  ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ನಿನ್ನೆ ಜಾಮ್ ನಗರಕ್ಕೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ (Salman Khan), ಜಾನ್ವಿ ಕಪೂರ್, ಓರಿ ಸೇರಿದಂತೆ ಹಲವರು  ಬಂದಿಳಿದಿದ್ದರು. ಜಾಮ್ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಫೋಟೋ ಮತ್ತು  ವಿಡಿಯೋಗಳು ವೈರಲ್ ಆಗಿದ್ದವು.

 

ಈ ಹಿಂದೆ ಅನಂತ್ ಅವರ ಪ್ರಿವೆಡ್ಡಿಂಗ್ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ಮಾಡೆಲಿಂಗ್ ಕ್ಷೇತ್ರದವರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಭಾಗಿಯಾಗಿ ಶುಭ ಹಾರೈಸಿದ್ದರು. ಈಗ ಹುಟ್ಟು ಹಬ್ಬಕ್ಕೂ ಆಯಾ ಕ್ಷೇತ್ರ ಸೆಲೆಬ್ರಿಟಿಗಳು ಸಾಕ್ಷಿಯಾಗಲು ಬರುತ್ತಿದ್ದಾರೆ.

Share This Article