ಅಜಯ್ ದೇವಗನ್ ನಟಿಸಿರುವ ‘ಮೈದಾನ’ ಚಿತ್ರಕ್ಕೆ ತಡೆಯಾಜ್ಞೆ ತಂದ ಮೈಸೂರಿನ ಅನಿಲ್ ಕುಮಾರ್

Public TV
2 Min Read

ಜಯ್ ದೇವಗನ್ (Ajay Devgan) ನಟಿಸಿರುವ ಮೈದಾನ (Maidan) ಸಿನಿಮಾ ಏಪ್ರಿಲ್ 11 ರಂದು ದೇಶಾದ್ಯಂತ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ ದೇಶದ ನಾನಾ ರಾಜ್ಯಗಳಲ್ಲಿ ಅಜಯ್ ದೇವಗನ್ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದರು. ಇದೀಗ ಚಿತ್ರಕ್ಕೆ ತಡೆಯಾಜ್ಞೆ ತರಲಾಗಿದೆ. ಮೈಸೂರಿನ (Mysore) ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಡೆಯಾಜ್ಞೆಯ (Injunction) ಆದೇಶ ನೀಡಿದ್ದಾರೆ.

ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರವನ್ನು ಬೋನಿ ಕಪೂರ್ ಮತ್ತು ಜೀ ಸ್ಟುಡಿಯೋ ಜಂಟಿಯಾಗಿ ನಿರ್ಮಾಣ ಮಾಡಿದೆ. ಚಿತ್ರಕ್ಕಾಗಿ ಸೈವಾನ್ ಖದ್ರಾಸ್, ಆಕಾಶ್ ಜಾವ್ಲಾ ಮತ್ತು ಅರುಣವಾ ಜಾಯ್ ಸೇನ್ ಗುಪ್ತಾ ಕಥೆ ಬರೆದಿದ್ದಾರೆ. ಆದರೆ, ಆ ಕಥೆ ತಮ್ಮದು ಎಂದು  ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ (Anil Kumar) ಎಂಬುವರು ಕೋರ್ಟ್ ಮೆಟ್ಟಿಲು ಏರಿದ್ದರು. ಅವರು ನೀಡಿರುವ ದೂರಿನ ಆಧಾರದ ಮೇಲೆ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ  ಆದೇಶ ನೀಡಿದ ಮೈಸೂರಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ.

ತಮ್ಮ ಚಿತ್ರದ ಮೂಲ ಕಥೆಯನ್ನು ಚಿತ್ರತಂಡ ಕದಿದ್ದೆ. 2019 ರ ಫೆಬ್ರವರಿಯಲ್ಲಿ ಸ್ಕ್ರೀನ್ ರೈಟ್ ಅಸೋಸಿಯೇಷನ್ ನಲ್ಲಿ ಚಿತ್ರದ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದೇನೆ. 2018ರಲ್ಲಿ ಚಿತ್ರ ಕಥೆಯನ್ನ ಲಿಂಕ್ ಡಿನ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಕಥೆಯನ್ನ ಗಮನಿಸಿದ  ಸುಕ್ ದಾಸ್ ಸೂರ್ಯವಂಶಿ ನನ್ನ ಜೊತೆ ಮಾತು ಕತೆ ನಡೆಸಿದರು. 1950 ರಲ್ಲಿ ಫೀಫಾ ವಿಶ್ವಕಪ್ ಟೂರ್ನಮೆಂಟ್ ನಿಂದ ಭಾರತ ತಂಡವನ್ನ ಹೊರಹಾಕಲಾಗಿತ್ತು. ಈ ಬಗ್ಗೆ ಚಿತ್ರ ಕಥೆಯನ್ನ ಸಿದ್ದಪಡಿಸಿದೆ. ಶಾರುಕ್ ಖಾನ್, ಸಲ್ಮಾನ್ ಖಾನ್, ಅಮಿರ್ ಖಾನ್, ಅಜಯ ದೇವಗನ್, ಅಕ್ಷರ್ ಕುಮಾರ್ ಎಲ್ಲರನ್ನ ಸೇರಿಸಿ ಚಿತ್ರ ಮಾಡಲು ನಾನೇ ಐಡಿಯಾ ಕೊಟ್ಟಿದ್ದೆ. ಪಾದ ಖಂಡುಕ ಎಂದು ಹೆಸರಿಟ್ಟಿದೆ. Players with out shoe ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ನನ್ನ ಮೂಲ ಕಥೆಯನ್ನು ಕದ್ದು ಮೈದಾನ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ರೈಟರ್ ಅನಿಲ್ ಕುಮಾರ್.

ಮೈದಾನ ಚಿತ್ರಕ್ಕೆ ಮಧ್ಯಂತರ ತಡೆಯಾಜ್ಞೆ ಸಿಕ್ಕಿದೆ. ಈ ವಿಷಯ ಸಿನಿಮಾ ತಂಡದ ಗಮನಕ್ಕೆ ತಲುಪು, ಈ ಸಿನಿಮಾ ಅಂದುಕೊಂಡ ದಿನಾಂಕದಂದು ಬಿಡುಗಡೆ ಆಗತ್ತಾ? ಅಥವಾ ಬೇರೆ ಏನಾದರೂ ಉಪಾಯ ನಡೆಯತ್ತಾ ಕಾದು ನೋಡಬೇಕು.

Share This Article