ರಾಮೇಶ್ವರಂ ಕೆಫೆ ಸ್ಫೋಟ – ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ ಎನ್‌ಐಎ

Public TV
1 Min Read

ಶಿವಮೊಗ್ಗ: ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast Case) ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ರಾಷ್ಟ್ರೀಯ ತನಿಖಾ ದಳ (NIA)  ವಿಚಾರಣೆ ನಡೆಸಿದೆ.

ಬಿಜೆಪಿ ‌ಕಾರ್ಯಕರ್ತ ಸಾಯಿಪ್ರಸಾದ್‌ ಅವರನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಇದನ್ನೂ ಓದಿ: RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

 

ಸಾಕ್ಷಿಯನ್ನಾಗಿ ಪರಿಗಣನೆ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ  ಸಾಯಿ ಪ್ರಸಾದ್‌  ಅವರನ್ನು ಎನ್‌ಐಎ ಸಾಕ್ಷಿಯನ್ನಾಗಿ ಪರಿಗಣಿಸಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುಜಾಮಿಲ್‌ಗೆ ಸಾಯಿ ಪ್ರಸಾದ್‌ ಮೊಬೈಲ್‌ ಮಾರಾಟ ಮಾಡಿದ್ದರು. ಮುಜಾಮಿಲ್ ಷರೀಫ್ ಪ್ರಕರಣದ ಮತ್ತೊಬ್ಬ ಆರೋಪಿ ಮುಸಾವೀರ್‌ಗೆ ಮೊಬೈಲ್ ಸಿಮ್ ಕೊಟ್ಟಿದ್ದ. ಮುಸಾವೀರ್ ಬಳಸಿದ್ದು ಇದೇ ಮೊಬೈಲ್ ಎಂಬ ಅನುಮಾನದ ಮೇಲೆ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಮಾರಾಟ ಮಾಡುತ್ತಿದ್ದ ಸಾಯಿ ಪ್ರಸಾದ್‌ ಅವರನ್ನು ವಿಚಾರಣೆ ನಡೆಸಿದೆ.

ಮುಜಾಮಿಲ್‌ ಮೊಬೈಲ್‌ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಎನ್‌ಐಎ ಸಾಯಿ ಪ್ರಸಾದ್‌ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿದೆ ಎಂಬ ವಿಚಾರ ಈಗ ತಿಳಿದುಬಂದಿದೆ.

Share This Article