ಜ್ಯೂ.ಎನ್‌ಟಿಆರ್ ಜೊತೆ ಸಿದ್ದು- ಹೊಸ ಚಿತ್ರದ ಬಗ್ಗೆ ಸುಳಿವು ಕೊಟ್ರಾ?

Public TV
1 Min Read

ಟಾಲಿವುಡ್ ನಟ ಸಿದ್ದು ಜೊನ್ನಲಗಡ್ಡ (Siddu Jonnalagadda) ಸದ್ಯ ‘ಟಿಲ್ಲು ಸ್ಕ್ವೇರ್’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ಜ್ಯೂ.ಎನ್‌ಟಿಆರ್ (Jr.Ntr) ಜೊತೆಗಿನ ಸಿದ್ದು ಫೋಟೋ ಶೇರ್ ಮಾಡಿದ್ದಾರೆ. ಹಾಗಾದ್ರೆ ಇಬ್ಬರೂ ಜೊತೆಯಾಗಿ ಹೊಸ ಸಿನಿಮಾ ಮಾಡ್ತಾರಾ? ಇಲ್ಲಿದೆ ಮಾಹಿತಿ.

ಸಿದ್ದು ಮತ್ತು ಅನುಪಮಾ (Anupama Parameshwaran) ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಜ್ಯೂ.ಎನ್‌ಟಿಆರ್ ‘ದೇವರ’ ಚಿತ್ರದ ಶೂಟಿಂಗ್ ಬ್ರೇಕ್ ಕೊಟ್ಟು ‘ಟಿಲ್ಲು ಸ್ಕ್ವೇರ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಿದ್ದು ಸಿನಿಮಾಗೆ ಭೇಷ್ ಎಂದಿದ್ದಾರೆ.

 

View this post on Instagram

 

A post shared by Siddhu Jonnalagadda (@siddu_buoy)

ಜ್ಯೂ.ಎನ್‌ಟಿಆರ್ ಒಬ್ಬರೇ ಅಲ್ಲ, ವಿಶ್ವಕ್ ಸೇನ್ ಕೂಡ ಸೆಲೆಬ್ರೆಟಿ ಪ್ರಿಮಿಯರ್‌ನಲ್ಲಿ ಭಾಗಿಯಾಗಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಜ್ಯೂ.ಎನ್‌ಟಿಆರ್ ಜೊತೆಗಿನ ಫೋಟೋ ಶೇರ್ ಮಾಡಿ ಬಿಗ್ ಸರ್ಪ್ರೈಸ್ ಸದ್ಯದಲ್ಲೇ ಸಿಗಲಿದೆ ಎಂದು ಸಿದ್ದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಜಾಜಿ’ ಆಲ್ಬಂ ಸಾಂಗ್ ರಿಲೀಸ್ ಮಾಡಿದ ದರ್ಶನ್

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ತಾರಕ್ ಜೊತೆ ಸಿದ್ದು ಹೊಸ ಸಿನಿಮಾ ಮಾಡ್ತಿದ್ದಾರಾ? ಎಂಬ ಗುಸು ಗುಸು ಶುರುವಾಗಿದೆ. ಇನ್ನೂ ಕೆಲವರು ‘ಟಿಲ್ಲು ಸ್ಕ್ವೇರ್’ ಸಿನಿಮಾ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗುತ್ತಿದ್ದಾರೆ ಎಂದು ಕೂಡ ಸುದ್ದಿ ಹಬ್ಬಿದೆ. ಅಸಲಿಗೆ ಯಾವುದು ನಿಜ? ಎಂಬುದನ್ನು ಕಾದುನೋಡಬೇಕಿದೆ.

‘ಟಿಲ್ಲು ಸ್ಕ್ವೇರ್’ ಸಿನಿಮಾ ಇದೇ ಮಾರ್ಚ್ 29ರಂದು ರಿಲೀಸ್ ಆಗಿದ್ದು, ಇದೀಗ 100 ಕೋಟಿ ರೂ. ಕ್ಲಬ್ ಸೇರುವತ್ತ ದಾಪುಗಾಲಿಡುತ್ತಿದೆ.

Share This Article