ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಶೂನ್ಯ ಮಳೆ ದಾಖಲು

Public TV
1 Min Read

ಬೆಂಗಳೂರು: ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ (Bengaluru) ಶೂನ್ಯ ಮಳೆ (Zero Rainfall ) ದಾಖಲಾಗಿದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫೆಬ್ರವರಿ 7.1ಮಿ.ಮೀ ಹಾಗೂ ಮಾರ್ಚ್‌ನಲ್ಲಿ 14.7ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ ಎರಡು ತಿಂಗಳಿನಲ್ಲಿ ಒಂದು ಹನಿಯು ಮಳೆಯಾಗದೇ ಶೂನ್ಯ ದಾಖಲೆ ವರದಿಯಾಗಿದೆ ಎಂದು ಹವಾಮಾನ ಇಲಾಖೆ (Meteorological Department) ತಿಳಿಸಿದೆ.  ಇದನ್ನೂ ಓದಿ: ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ ಬಾಲಕ – ಕಾಲು ಅಲುಗಾಡಿಸುತ್ತಿರುವ ದೃಶ್ಯ ಸೆರೆ

 

ವಾಡಿಕೆಯ ಪ್ರಕಾರ ಏಪ್ರಿಲ್‌ನಲ್ಲಿ 61.7 ಮೀ ಮಳೆಯಾಗಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಏಪ್ರಿಲ್ ಮಧ್ಯದವರೆಗೂ ಮಳೆಯಾಗುವ ಸುಳಿವಿಲ್ಲ. ಇದನ್ನೂ ಓದಿ: ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

ಬೆಂಗಳೂರಿನಲ್ಲಿ ಮತ್ತೆ ಎರಡು ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Share This Article