ಹಿಟ್ ಚಿತ್ರ ರಿಜೆಕ್ಟ್ ಮಾಡಿ ಟ್ರೋಲ್‌ನಿಂದ ಬಚಾವ್ ಆದ ಶ್ರೀಲೀಲಾ

Public TV
1 Min Read

ನ್ನಡದ ನಟಿ ಶ್ರೀಲಿಲಾ (Sreeleela) ಸದ್ಯ ಟಾಲಿವುಡ್ ಅಂಗಳದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಸದ್ಯ ಸೂಪರ್ ಡೂಪರ್ ಹಿಟ್ ಸಿನಿಮಾವನ್ನು ಶ್ರೀಲೀಲಾ ರಿಜೆಕ್ಟ್ ಮಾಡಿರೋದಕ್ಕೆ ಫ್ಯಾನ್ಸ್‌ ಖುಷಿಪಡುತ್ತಿದ್ದಾರೆ. ಇದರಿಂದ ಕಿಸ್ ಬೆಡಗಿ ಟ್ರೋಲ್‌ನಿಂದ ಬಚಾವ್ ಆಗಿದ್ದಾರೆ.

‘ಡಿಜೆ ಟಿಲ್ಲು’ (Dj Tillu) ಚಿತ್ರದ ನಂತರ ‘ಟಿಲ್ಲು ಸ್ಕ್ವೇರ್‌’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ನಾಲ್ಕೇ ದಿನಕ್ಕೆ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಆಫರ್ ಅನ್ನು ಕನ್ನಡತಿ ಶ್ರೀಲೀಲಾ ಕೈಬಿಟ್ಟಿದ್ದರು. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

‘ಟಿಲ್ಲು ಸ್ಕ್ವೇರ್‌’ (Tillu Square) ಸಿನಿಮಾ ಸಖತ್ ಬೋಲ್ಡ್ ಸೀನ್‌ಗಳಿತ್ತು. ಹಸಿಬಿಸಿ ದೃಶ್ಯಗಳಲ್ಲಿ ನಟಿಸಬೇಕಿತ್ತು. ಹಾಗಾಗಿ ನಾಯಕಿ ಪಾತ್ರಕ್ಕೆ ಚಿತ್ರತಂಡ ಮೊದಲು ಸಂಪರ್ಕಿಸಿದ್ದು ಶ್ರೀಲೀಲಾರನ್ನು, ಅವರು ಈ ಚಿತ್ರದಲ್ಲಿ ನಟಿಸಲ್ಲ ಎಂದು ರಿಜೆಕ್ಟ್ ಮಾಡಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದ ಕಾರಣ ನೋ ಎಂದಿದ್ದರು. ಇದನ್ನೂ ಓದಿ:10 ವರ್ಷಗಳ ನಂತರ ಮತ್ತೆ ಒಂದಾದ ‘ಒಕಾ ಲೈಲಾ ಕೋಸಂ’ ಜೋಡಿ

ಬಳಿಕ ಶ್ರೀಲೀಲಾ ನಟಿಸಬೇಕಿದ್ದ ಪಾತ್ರಕ್ಕೆ ಅನುಪಮಾ ಪರಮೇಶ್ವರನ್ (Anupama Parameshwaran) ಎಂಟ್ರಿ ಕೊಟ್ಟರು. ಬೋಲ್ಡ್ ಸೀನ್‌ಗಳಲ್ಲಿ ನಟಿಸಿರುವ ಕಾರಣ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಇದನ್ನು ನೋಡಿ ಶ್ರೀಲೀಲಾ ಈ ಚಿತ್ರ ರಿಜೆಕ್ಟ್ ಮಾಡಿದ್ದು ಸರಿ ಹೋಯಿತು. ಅವರು ಟ್ರೋಲ್‌ನಿಂದ ಬಚಾವ್ ಆದರು ಎಂದು ಫ್ಯಾನ್ಸ್ ಖುಷಿ ಪಡ್ತಿದ್ದಾರೆ.

ಟಾಲಿವುಡ್‌ನಲ್ಲಿ ಶ್ರೀಲೀಲಾಗೆ ಭಾರೀ ಬೇಡಿಕೆ ಇದೆ. ಇತ್ತೀಚೆಗೆ ಅವರು ನಟಿಸಿದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿದೆ. ಸಕ್ಸಸ್‌ಗಾಗಿ ನಟಿ ಎದುರು ನೋಡ್ತಿದ್ದಾರೆ. ಆದರೆ ಎಂಬಿಬಿಎಸ್ (MBBS) ಕೊನೆಯ ಪರೀಕ್ಷೆ ಇರುವ ಕಾರಣ ಸಿನಿಮಾದಿಂದ ನಟಿ ಬ್ರೇಕ್ ತೆಗೆದುಕೊಂಡಿದ್ದಾರೆ.

Share This Article