ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು

Public TV
1 Min Read

ಶಿವಮೊಗ್ಗ: ಧಾರ್ಮಿಕ ಕೇಂದ್ರದಲ್ಲಿ ಚುನಾವಣಾ ಪ್ರಚಾರ (Election Campaign) ಆರೋಪದಡಿ ಬಿಜೆಪಿ (BJP) ಬಂಡಾಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಪ್ರಕರಣ ದಾಖಲಾಗಿದೆ.

ಈಶ್ವರಪ್ಪ ಶಿವಮೊಗ್ಗದ (Shivamogga) ಗೋಪಾಳದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿದ್ದ ವೇಳೆ ಮತಪ್ರಚಾರ ಮಾಡಿದ್ದರು. ಧಾರ್ಮಿಕ ಕೇಂದ್ರದಲ್ಲಿ ಪ್ರಚಾರ ಮಾಡಿದ್ದಕ್ಕೆ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಇಂದು ಸುಮಲತಾರನ್ನು ಭೇಟಿಯಾಗಲಿದ್ದಾರೆ ಹೆಚ್‌ಡಿಕೆ

ಈಶ್ವರಪ್ಪ ವಿರುದ್ಧ ತುಂಗಾನಗರ ಠಾಣೆಗೆ ಚುನಾವಣಾಧಿಕಾರಿ ದೂರು ಸಲ್ಲಿಸಿದ್ದಾರೆ. ಈ ಕುರಿತು ತುಂಗಾನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

Share This Article