ಅರೆಬೆತ್ತಲೆಯಾಗಿ ಹೋಳಿ ಆಡಿದ ನಟಿ ಆಕಾಂಕ್ಷಾ ಪುರಿ

Public TV
1 Min Read

ಟಿ ಆಕಾಂಕ್ಷಾ ಪುರಿ ತಮ್ಮ ಇನ್ಸ್ಟಾದಲ್ಲಿ ಅರೆಬೆತ್ತಲೆಯ ಫೋಟೋ ಹಂಚಿಕೊಂಡಿದ್ದಾರೆ. ಟಾಪ್ ಲೆಸ್ (Topless) ಆಗಿ ಹೋಳಿ ಆಡಿರುವಂತಹ ಫೋಟೋ ಹಂಚಿಕೊಂಡು, ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಫೋಟೋಗೆ ಪರ ಮತ್ತು ವಿರೋಧದ ಕಾಮೆಂಟ್ ಗಳು ಹರಿದು ಬಂದಿವೆ. ಸದಾ ವಿವಾದದ ಮೂಲಕವೇ ಸದ್ದು ಮಾಡುವ ನಟಿ ಈಕೆ.

ಈ ಹಿಂದೆ ಹಿಂದಿ (Hindi)  ಓಟಿಟಿಯಲ್ಲಿ (OTT) ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಶೋನಲ್ಲಿ ನಟಿ ಆಕಾಂಕ್ಷಾ ಪುರಿ ಮತ್ತು ಮಾಡೆಲ್ ಜದ್ ಹದೀದ್ (Jad Hadid) ಲಿಪ್ ಲಾಕ್ ಮಾಡಿಕೊಂಡ ವಿಚಾರ ಭಾರೀ ಸದ್ದು ಮಾಡಿತ್ತು. ಮೂವತ್ತು ಸೆಕೆಂಡ್ ಗಳ ಕಾಲ ಇಬ್ಬರೂ ಲಿಪ್ ಲಾಕ್ (Lip Lock) ಮಾಡಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು. ನಂತರ ಈ ವಿಚಾರವಾಗಿ ಸಲ್ಮಾನ್ ಖಾನ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೊಂದು ಫ್ಯಾಮಿಲಿ ಶೋ ಎಲ್ಲೆ ಮೀರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದರು.

ಲಿಪ್ ಲಾಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಗ್ ಬಾಸ್ (Bigg Boss)  ಮನೆಯಿಂದ ಆಕಾಂಕ್ಷಾ ಪುರಿ (Akanksha Puri) ಹೊರ ಬಂದಿದ್ದರು. ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡದೇ ಇರುವ ಕಾರಣಕ್ಕಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಆಕಾಂಕ್ಷಾ ಆಚೆ ಬರುತ್ತಿದ್ದಂತೆಯೇ ಲಿಪ್ ಲಾಪ್ ಬಗ್ಗೆಯೇ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಅವತ್ತು ಬೋಲ್ಡ್ ಆಗಿಯೇ ಉತ್ತರ ಕೊಟ್ಟಿದ್ದರು ನಟಿ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆಕಾಂಕ್ಷಾ, ‘ಲಿಪ್ ಲಾಕ್ ಮಾಡಿಕೊಂಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ. ಅದೊಂದು ಟಾಸ್ಕ್ ಆಗಿತ್ತು. ಅದನ್ನು ಟಾಸ್ಕ್ ಅಂದುಕೊಂಡೆ ನಾನು ಅದಕ್ಕೆ ಸಮ್ಮತಿಸಿದ್ದೆ ಮತ್ತು ಮಾಡಿದ್ದೆ. ಈ ಕುರಿತು ಯಾವುದೇ ಬೇಸರ ನನಗಿಲ್ಲ’ ಎಂದಿದ್ದು ಅಚ್ಚರಿ ಮೂಡಿಸಿದ್ದರು.

 

ಲಿಪ್ ಲಾಕ್ ಮಾಡಬೇಕು ಎನ್ನುವುದು ಟಾಸ್ಕ್ ಅಲ್ಲದೇ ಇದ್ದರೂ, ಮನೆಯಲ್ಲಿದ್ದವರು ಪ್ರಚೋದಿಸಿದರು ಎನ್ನುವ ಕಾರಣಕ್ಕಾಗಿ ನಡೆದ ಘಟನೆ ಅದಾಗಿದ್ದರೂ ಆಕಾಂಕ್ಷಾ ಮಾತ್ರ ಅದೊಂದು ಟಾಸ್ಕ್ ಎಂದು ಸಮರ್ಥಿಸಿದ್ದರು. ಆ ಟಾಸ್ಕ್ ಅನ್ನು ನಾನು ಮಾಡಲೇಬೇಕಿತ್ತು ಎಂದು ಹೇಳಿಕೊಂಡಿದ್ದರು.

Share This Article