ಸೋನು ಶ್ರೀನಿವಾಸ ಗೌಡ ಯಾವುದೇ ಹಣದ ಸಹಾಯ ಮಾಡಿಲ್ಲ- ಪೊಲೀಸರಿಂದ ಸ್ಥಳ ಮಹಜರು

Public TV
1 Min Read

ರಾಯಚೂರು: ಕಾನೂನುಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸೋನು ಶ್ರೀನಿವಾಸ ಗೌಡಗೆ (Sonu Srinivas Gowda) ಮತ್ತಷ್ಟು ಸಂಕಷ್ಟ ಎದುರಾಗಿದೆ.‌

ರಾಯಚೂರಿನ ಮಸ್ಕಿ (Maski) ತಾಲೂಕಿನ ಕಾಚಾಪುರದಲ್ಲಿ ಪೊಲೀಸರು (Police) ಸ್ಥಳ ಮಹಜರು ನಡೆಸಿದ್ದಾರೆ. ಸೋನು ಗೌಡಳನ್ನ ಸಹ ಬಾಡರಳ್ಳಿ ಪೊಲೀಸರು ರಾಯಚೂರು (Raichuru) ಜಿಲ್ಲೆಗೆ ಈಗಾಗಲೇ ಕರೆದುಕೊಂಡು ಬಂದಿದ್ದಾರೆ. ಕಾಚಾಪುರ ಗ್ರಾಮಕ್ಕೆ ಸೋನುಗೌಡಳನ್ನ ಕರೆದುಕೊಂಡು ಬಂದು ಮಗುವಿನ ಮನೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

 ಈ ಮಧ್ಯೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಮಗುವಿನ ಚಿಕ್ಕಪ್ಪ ಸೋನುಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನ ನಾವು ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣದ‌ ಸಹಾಯ ಮಾಡಿಲ್ಲ. ನಮ್ಮ ಮಗಳನ್ನು ಓದಿಸುತ್ತೇನೆ. ಚೆನ್ನಾಗಿ ಸಾಕುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಈಗ ದತ್ತು ತೆಗೆದುಕೊಂಡಿದ್ದೇನೆ ಅಂತ ಹೇಳಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೋದಿ ವಿರುದ್ಧ ಅಜಯ್ ರೈ ಸ್ಪರ್ಧೆ – ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ರಿಲೀಸ್

Share This Article